Daily Horoscope

Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾ, ದ.ಆಫ್ರಿಕಾ ವಿರುದ್ಧ ಎಡೆಬಿಡದೇ ಸರಣಿ ಆಡಲಿರುವ ಟೀಂ ಇಂಡಿಯಾ

ಟೀಂ ಇಂಡಿಯಾ
ಮುಂಬೈ: ಟಿ20 ವಿಶ್ವಕಪ್ ಕ್ರಿಕೆಟ್ ಗೆ ಮುನ್ನ ಟೀಂ ಇಂಡಿಯಾ ಆಸ್ಟ್ರೇಲಿಯಾ ಮತ್ತು ದ.ಆಫ್ರಿಕಾ ತಂಡಗಳ ವಿರುದ್ಧ ನಿರಂತರ ಕ್ರಿಕೆಟ್ ಸರಣಿ ಆಡಲಿದೆ.

ಸೆಪ್ಟೆಂಬರ್ ನಲ್ಲಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಮಾಡಲಿದ್ದು ಮೂರು ಟಿ20 ಪಂದ್ಯಗಳ ಸರಣಿ ಆಡಲಿದೆ. ಮೊದಲ ಪಂದ್ಯ ಸೆಪ್ಟೆಂಬರ್ 20 ರಂದು ಮೊಹಾಲಿಯಲ್ಲಿ, ಎರಡನೇ ಪಂದ್ಯ ಸೆಪ್ಟೆಂಬರ್ 23 ರಂದು ನಾಗ್ಪುರದಲ್ಲಿ ಮತ್ತು ಮೂರನೇ ಪಂದ್ಯ ಸೆಪ್ಟೆಂಬರ್ 25 ರಂದು ಹೈದರಾಬಾದ್ ನಲ್ಲಿ ನಡೆಯಲಿದೆ.

ಇದರ ಬೆನ್ನಲ್ಲೇ ಕೇವಲ ಎರಡೇ ದಿನದ ಅಂತರದಲ್ಲಿ ದ.ಆಫ್ರಿಕಾ ಕ್ರಿಕೆಟ್ ತಂಡದ ಜೊತೆಗೆ ತವರಿನಲ್ಲಿ ಭಾರತ ಟಿ20 ಮತ್ತು ಏಕದಿನ ಸರಣಿ ಆಡಲಿದೆ. ಇದು ಸೆಪ್ಟೆಂಬರ್ 28 ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ತಿರುವನಂತಪುರಂನಲ್ಲಿ ನಡೆಯಲಿದೆ. ಎರಡನೇ ಟ20 ಪಂದ್ಯ ಅಕ್ಟೋಬರ್ 2 ರಂದು ಗುವಾಹಟಿಯಲ್ಲಿ ನಡೆದರೆ ಮೂರನೇ ಪಂದ್ಯ ಅಕ್ಟೋಬರ್ 4 ರಂದು ಇಂದೋರ್ ನಲ್ಲಿ ನಡೆಯಲಿದೆ.

ಏಕದಿನ ಸರಣಿಯ ಮೊದಲ ಪಂದ್ಯ ಅಕ್ಟೋಬರ್ 6 ರಂದು ಲಕ್ನೋದಲ್ಲಿ ಆರಂಭವಾಗಲಿದೆ. ಅಕ್ಟೋಬರ್ 9 ರಂದು ರಾಂಚಿಯಲ್ಲಿ ಎರಡನೇ ಪಂದ್ಯ ಮತ್ತು ಅಕ್ಟೋಬರ್ 11 ರಂದು ದೆಹಲಿಯಲ್ಲಿ ಕೊನೆಯ ಪಂದ್ಯ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಮನ್ ವೆಲ್ತ್ ಗೇಮ್ಸ್ ಸಕ್ಸಸ್ ಬಳಿಕ ಒಲಿಂಪಿಕ್ಸ್ ಗೂ ಬರಲಿದೆ ಕ್ರಿಕೆಟ್