Publish Date: Fri, 05 Aug 2022 (08:25 IST)
Updated Date: Fri, 05 Aug 2022 (09:02 IST)
ಲಂಡನ್: ಐಸಿಸಿ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಒತ್ತಾಯದ ಮೇರೆಗೆ ಈ ಬಾರಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕ್ರಿಕೆಟ್ ನ್ನು ಸೇರ್ಪಡೆಗೊಳಿಸಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆಯೂ ಬಂದಿದೆ.
ಇದರ ಬೆನ್ನಲ್ಲೇ ಈಗ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಒಲಿಂಪಿಕ್ಸ್ ನಲ್ಲೂ ಕ್ರಿಕೆಟ್ ಸೇರ್ಪಡೆಗೊಳಿಸಲು ಹಸಿರು ನಿಶಾನೆ ತೋರಿದೆ.
2028 ರಲ್ಲಿ ಲಾಸ್ ಏಂಜಲೀಸ್ ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಹೊಸದಾಗಿ 28 ಕ್ರೀಡೆಗಳನ್ನು ಸೇರ್ಪಡೆಗೊಳಿಸಲು ಒಲಿಂಪಿಕ್ಸ್ ಸಮಿತಿ ಒಪ್ಪಿಗೆ ನೀಡಿದೆ. ಇದರಲ್ಲಿ ಕ್ರಿಕೆಟ್ ಕೂಡಾ ಸೇರಿದ್ದು, ಕ್ರಿಕೆಟ್ ಪ್ರಿಯರಿಗೆ ಖುಷಿಯ ಸುದ್ದಿಯಾಗಿದೆ.