ಬರ್ಮಿಂಗ್ ಹ್ಯಾಮ್ಸ್: ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಖ್ಯಾತ ಬ್ಯಾಡ್ಮಿಟಂನ್ ತಾರೆ ಪಿ.ವಿ. ಸಿಂಧು ಮೊದಲ ಸುತ್ತಿನಲ್ಲಿ ಸುಲಭ ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.
ಮಾಲ್ಡೀವ್ಸ್ ಫಾತಿಮಾತ್ ನಬಾಹ ವಿರುದ್ಧ ಸಿಂಧು 21-4, 21-11 ಅಂತರದ ನೇರ ಸೆಟ್ ನಿಂದ ಸುಲಭ ಗೆಲುವು ಸಾಧಿಸಿದರು. ಭಾರತದ ಅನುಭವಿ ತಾರೆಗೆ ಎದುರಾಳಿ ಸವಾಲು ಎನಿಸಲೇ ಇಲ್ಲ.
ಇನ್ನೊಂದೆಡೆ ಮಹಿಳೆಯರ 200 ಮೀ. ಸ್ಪರ್ಧೆಯಲ್ಲಿ ಭಾರತದ ಹಿಮಾ ದಾಸ್ ಶುಭಾರಂಭ ಮಾಡಿದ್ದು ಸೆಮಿಫೈನಲ್ ಸುತ್ತಿಗೆ ಅರ್ಹತೆ ಪಡೆದಿದ್ದಾರೆ. ಇನ್ನೊಂದೆಡೆ ಮಹಿಳೆಯರ ಹ್ಯಾಮರ್ ಥ್ರೋ ವಿಭಾಗದಲ್ಲಿ ಭಾರತದ ಮಂಜು ಬಾಲಾ ಫೈನಲ್ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.