ಇಂಧೋರ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಸೋಲಿನ ಬಳಿಕ ಟೀಂ ಇಂಡಿಯಾ ಅಭಿಮಾನಿಗಳು ಕೆಎಲ್ ರಾಹುಲ್ ಲಕ್ಕಿ ಚಾರ್ಮ್ ಎಂದಿದ್ದಾರೆ.
ಕಳಪೆ ಫಾರ್ಮ್ ನಲ್ಲಿರುವ ರಾಹುಲ್ ಈ ಪಂದ್ಯದಿಂದ ಹೊರಗುಳಿದಿದ್ದರು. ಕಳೆದ ಎರಡು ಪಂದ್ಯಗಳಲ್ಲಿ ಆಡಿದ್ದರೂ ರಾಹುಲ್ ರನ್ ಗಳಿಸಿರಲಿಲ್ಲ. ಹಾಗಿದ್ದರೂ ಆ ಎರಡೂ ಪಂದ್ಯಗಳನ್ನು ಭಾರತ ಗೆದ್ದಿತ್ತು.
ಹೀಗಾಗಿ ನೆಟ್ಟಿಗರು ರಾಹುಲ್ ಫಾರ್ಮ್ ನಲ್ಲಿಲ್ಲದೇ ಇದ್ದರೂ ತಂಡದ ಪಾಲಿಗೆ ಲಕ್ಕಿ ಚಾರ್ಮ್ ಎಂದು ಕರೆದಿದ್ದಾರೆ. ರಾಹುಲ್ ಹೊರಹಾಕಿದೊಡನೆ ಭಾರತವೂ ಸೋಲಬೇಕಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ.