Publish Date: Fri, 03 Mar 2023 (11:05 IST)
Updated Date: Fri, 03 Mar 2023 (11:06 IST)
ಇಂಧೋರ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್,ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಟೆಸ್ಟ್ ಪಂದ್ಯವನ್ನು 9 ವಿಕೆಟ್ ಗಳಿಂದ ಗೆದ್ದ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಆಡುವ ಅರ್ಹತೆ ಪಡೆದಿದೆ.
ಭಾರತದ ವಿರುದ್ಧ ಮೂರನೇ ಪಂದ್ಯ ಗೆಲ್ಲಲು 76 ರನ್ ಗಳ ಸುಲಭ ಗುರಿ ಬೆನ್ನತ್ತಿದ ಆಸೀಸ್ ಮೂರನೇ ದಿನವಾದ ಇಂದು ಬೆಳಗಿನ ಅವಧಿಯಲ್ಲೇ 1 ವಿಕೆಟ್ ನಷ್ಟಕ್ಕೆ 78 ರನ್ ಗಳಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಒಂದು ವೇಳೆ ಈ ಪಂದ್ಯ ಸೋತಿದ್ದರೆ ಆಸೀಸ್ ಫೈನಲ್ ಆಡುವ ಅವಕಾಶ ಕಳೆದುಕೊಳ್ಳುತ್ತಿತ್ತು.
ಆದರೆ ಇದೀಗ ಭಾರತವೂ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಆಡಬೇಕಾದರೆ ಮುಂದಿನ ಪಂದ್ಯ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಒಂದು ವೇಳೆ ಟೀಂ ಇಂಡಿಯಾ ಮುಂದಿನ ಪಂದ್ಯವನ್ನೂ ಸೋತರೆ ಫೈನಲ್ ಕನಸು ಭಗ್ನವಾಗಲಿದೆ.