Publish Date: Sat, 04 Mar 2023 (08:30 IST)
Updated Date: Sat, 04 Mar 2023 (09:00 IST)
ಮುಂಬೈ: ಮಹಿಳಾ ಕ್ರಿಕೆಟ್ ನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಬಿಸಿಸಿಐ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಪುರುಷರಂತೇ ಮಹಿಳೆಯರಿಗೂ ಐಪಿಎಲ್ ಆಯೋಜಿಸಿದ್ದು, ಇಂದಿನಿಂದ ಟೂರ್ನಿಗೆ ಚಾಲನೆ ಸಿಗಲಿದೆ.
ಮುಂಬೈನ ಬ್ರೆಬೋರ್ನ್ ಮೈದಾನ ಮತ್ತು ಡಿ ವೈ ಪಾಟೀಲ್ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ. ಒಟ್ಟು ಐದು ತಂಡಗಳು ಕಣದಲ್ಲಿವೆ. ಮಹಿಳೆಯರಿಗೆ ಈ ಪಂದ್ಯಗಳಿಗೆ ಉಚಿತ ಪ್ರವೇಶವಿರುವುದು ವಿಶೇಷ. ಹೆಚ್ಚಿನ ಪಂದ್ಯಗಳು ಮಧ್ಯಾಹ್ನ 3.30 ಮತ್ತು ಸಂಜೆ 7.30 ಕ್ಕೆ ಆರಂಭವಾಗಲಿದೆ. ಸ್ಪೋರ್ಟ್ಸ್ 18 ನೆಟ್ ವರ್ಕ್ ಮತ್ತು ಜಿಯೋ ಆಪ್ ನಲ್ಲಿ ನೇರಪ್ರಸಾರವಿದೆ.
ಇಂದು ಅದ್ಧೂರಿಯಾಗಿ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದ್ದು, ಬಾಲಿವುಡ್ ಕಲಾವಿದರಿಂದ ಮನರಂಜನಾ ಕಾರ್ಯಕ್ರಮವಿರಲಿದೆ. ಅದಾದ ಬಳಿಕ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ಮುಖಾಮುಖಿಯಾಗಲಿದೆ. ಮುಂಬೈ ತಂಡಕ್ಕೆ ಹರ್ಮನ್ ಪ್ರೀತ್ ಕೌರ್ ನಾಯಕಿಯಾದರೆ ಗುಜರಾತ್ ತಂಡಕ್ಕೆ ಆಶ್ಲೇ ಗಾರ್ಡನರ್ ನಾಯಕಿಯಾಗಿದ್ದಾರೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.