Publish Date: Mon, 15 Mar 2021 (09:01 IST)
Updated Date: Mon, 15 Mar 2021 (09:02 IST)
ಬೆಂಗಳೂರು: ಕಿಚ್ಚ ಸುದೀಪ್ ಸಿನಿ ಜೀವನಕ್ಕೆ ಕಾಲಿಟ್ಟು 25 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಕೋಟಿಗೊಬ್ಬ 3 ಸಿನಿಮಾ ತಂಡ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿದೆ.
ಇಂದು ಶ್ರೀ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಕೂಡಾ ಭಾಗಿಯಾಗಲಿದ್ದಾರೆ. ಇಂದು ಸಂಜೆ 6 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಜೊತೆಗೆ ನಟರಾದ ರವಿಚಂದ್ರನ್, ರಮೇಶ್ ಅರವಿಂದ್, ಉಪೇಂದ್ರ, ಶಿವರಾಜ್ ಕುಮಾರ್ ಭಾಗಿಯಾಗಿ ಸುದೀಪ್ ಜೊತೆಗಿನ ನೆನಪು ಮೆಲುಕು ಹಾಕಲಿದ್ದಾರೆ. ವಿಕ್ರಾಂತ್ ರೋಣ ದುಬೈನಲ್ಲಿ ಕಿಚ್ಚ ಸುದೀಪ್ ಬೆಳ್ಳಿ ಹಬ್ಬ ಕಾರ್ಯಕ್ರಮವನ್ನು ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಆಚರಿಸಿತ್ತು. ಈಗ ಕೋಟಿಗೊಬ್ಬ 3 ಸಿನಿಮಾ ತಂಡ ವಿಶೇಷ ಕಾರ್ಯಕ್ರಮ ಮೂಲಕ ಸನ್ಮಾನಿಸಲಿದೆ.