Select Your Language

Notifications

webdunia
webdunia
webdunia
webdunia

ಗೌತಮ್ ಗಂಭೀರ್ ಕೋಚ್ ಅಲ್ಲ, ಟೀಂ ಮ್ಯಾನೇಜರ್ ಆಗಬಹುದಷ್ಟೇ: ಕಪಿಲ್ ದೇವ್

Gautam Gambhir
ಮುಂಬೈ: ಟೀಂ ಇಂಡಿಯಾ ಕೋಚ್ ಆಗಲು ಗೌತಮ್ ಗಂಭೀರ್ ಲಾಯಕ್ಕಲ್ಲ. ಕೇವಲ ಟೀಂ ಮ್ಯಾನೇಜರ್ ಆಗಬಹುದಷ್ಟೇ ಎಂದು ಮಾಜಿ ನಾಯಕ ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.

‘ಇಂದು ಕೋಚ್ ಎಂಬ ಪದ ಸಾಮಾನ್ಯವಾಯಿತು. ಇದು ಅಗತ್ಯವಿಲ್ಲ. ಗೌತಮ್ ಗಂಭೀರ್ ಕೋಚ್ ಆಗಲು ಸಾಧ್ಯವಿಲ್ಲ. ಅವರು ತಂಡದ ಮ್ಯಾನೇಜರ್ ಆಗಬಹುದಷ್ಟೇ’ ಎಂದಿದ್ದಾರೆ. ಇಂದಿನ ದಿನಕ್ಕೆ ಕೋಚ್ ಎಂಬ ಸೂಕ್ತವಲ್ಲ ಎಂದಿದ್ದಾರೆ.

‘ಕೋಚ್ ಎಂಬವರು ಶಾಲೆ, ಕಾಲೇಜು ಮಟ್ಟದಲ್ಲಿ ಅಗತ್ಯವಿದೆ. ಅಲ್ಲಿ ತರಬೇತಿ ನೀಡುವವರು ಕೋಚ್ ಗಳು. ಆದರೆ ಈಗ ಆಟಗಾರರನ್ನು ಮ್ಯಾನೇಜ್ ಮಾಡಲಷ್ಟೇ ಒಬ್ಬರು ಬೇಕು. ಒಬ್ಬ ಮ್ಯಾನೇಜರ್ ಆಗಿ ಏನು ಮಾಡಬೇಕು ಎಂದು ನಿರ್ದೇಶಿಸಬಹುದು.

ತಂಡದಲ್ಲಿ ಒಂದು ರೀತಿಯ ಕಂಫರ್ಟ್ ವಾತಾವರಣ ಸೃಷ್ಟಿಸಲು ಮತ್ತು ನಿಮ್ಮಿಂದ ಸಾಧ್ಯ ಎಂದು ಪ್ರೋತ್ಸಾಹ ನೀಡಲು ಒಬ್ಬ ವ್ಯಕ್ತಿ ಬೇಕು. ಅದು ಒಬ್ಬ ಕೋಚ್ ಆಗಿ ಅಲ್ಲ ಮ್ಯಾನೇಜರ್ ಆಗಿ ಮಾಡುವ ಕೆಲಸ ಅಷ್ಟೇ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs SA: ಅಂತಿಮ ಟಿ20 ಪಂದ್ಯಕ್ಕೆ ಟೀಂ ಇಂಡಿಯಾಗೆ ಶುಭಮನ್ ಗಿಲ್ ಗೈರು ಕಾಡಲಿದೆಯೇ