ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ಗೌತಮ್ ಗಂಭೀರ್ ತಂಡಕ್ಕೆ ಎಂಟ್ರ ಕೊಟ್ಟ ಮೇಲೆ ಹಲವು ಪ್ರತಿಭಾವಂತ ಕ್ರಿಕೆಟಿಗರು ಸದ್ದಿಲ್ಲದೇ ಸೈಡ್ ಲೈನ್ ಆಗಿದ್ದಾರೆ. ಇದೀಗ ಮತ್ತೊಬ್ಬ ಟೀಂ ಇಂಡಿಯಾ ಅನುಭವಿಯನ್ನೂ ಇದ್ದೂ ಇಲ್ಲದಂತೆ ಸೈಡ್ ಲೈನ್ ಮಾಡುತ್ತಿದ್ದಾರಾ ಎಂಬ ಅನುಮಾನ ಮೂಡಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯಗೆ ಬ್ಯಾಟಿಂಗ್ ಅವಕಾಶ ಸಿಕ್ಕಿದರೂ ಅವರನ್ನು ಬೌಲರ್ ಆಗಿ ಹೆಚ್ಚು ಬಳಸಿಕೊಳ್ಳಲಾಗುತ್ತಿಲ್ಲ. ಈ ಹಿಂದೆ ಹಾರ್ದಿಕ್ ಓಪನಿಂಗ್ ಸ್ಪೆಲ್ ಮಾಡಿದ ಉದಾಹರಣೆಗಳೂ ಇವೆ. ಆದರೆ ಈಗ ಕಾಟಾಚಾರಕ್ಕೆ ಕೇವಲ ಒಂದೋ ಎರಡೋ ಓವರ್ ನೀಡಲಾಗುತ್ತಿದೆ.
ಹೀಗಾಗಿ ಬೌಲರ್ ಹಾರ್ದಿಕ್ ಪಾಂಡ್ಯನನ್ನು ಗಂಭಿರ್ ಸೈಡ್ ಲೈನ್ ಮಾಡುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ಕಳೆದ ಪಂದ್ಯದಲ್ಲಿ ಸೋತ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಹಾರ್ದಿಕ್-ಗಂಭೀರ್ ನಡುವೆ ಬಿಸಿ ಬಿಸಿ ಚರ್ಚೆ ನಡೆದಿತ್ತು ಎಂದು ಕೆಲವರು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.
ಹೀಗಾಗಿ ಮೊಹಮ್ಮದ್ ಸಿರಾಜ್, ಶಮಿ, ಸಂಜು ಸ್ಯಾಮ್ಸನ್ ಬಳಿಕ ಈಗ ಹಾರ್ದಿಕ್ ಪಾಂಡ್ಯರನ್ನು ಸೈಡ್ ಲೈನ್ ಮಾಡಲಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ.