Select Your Language

Notifications

webdunia
webdunia
webdunia
webdunia

5 ವಿಕೆಟ್ ಪಡೆದ ಚೆಂಡನ್ನು ಅರ್ಹ ವ್ಯಕ್ತಿಗೇ ಗಿಫ್ಟ್ ಕೊಟ್ಟ ಜಸ್ಪ್ರೀತ್ ಬುಮ್ರಾ

Jasprit Bumrah

Krishnaveni K

ಲೀಡ್ಸ್ , ಸೋಮವಾರ, 23 ಜೂನ್ 2025 (16:31 IST)
Photo Credit: Instagram
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ 5 ವಿಕೆಟ್ ಕಬಳಿಸಿದ್ದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಈ ಚೆಂಡನ್ನು ಅರ್ಹ ವ್ಯಕ್ತಿಯೊಬ್ಬರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ಪತ್ನಿ ಸಂಜನಾ ಗಣೇಶನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇಂಗ್ಲೆಂಡ್ ನ ಮೊದಲ ವಿಕೆಟ್ ಪಡೆದವರೂ ಬುಮ್ರಾ, ಕೊನೆಯ ವಿಕೆಟ್ ಪಡೆದವೂ ಅವರೇ. ಅವರ ಬೌಲಿಂಗ್ ನಲ್ಲಿ ಒಟ್ಟು ಮೂರು ಕ್ಯಾಚ್ ಡ್ರಾಪ್ ಆಗಿದ್ದರೂ 5 ವಿಕೆಟ್ ಗಳ ಗೊಂಚಲು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದರೊಂದಿಗೆ ಸೇನಾ ರಾಷ್ಟ್ರಗಳಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆಯೂ ಅವರದ್ದಾಗಿತ್ತು.

ಸಾಮಾನ್ಯವಾಗಿ 5 ವಿಕೆಟ್ ಪಡೆದ ಚೆಂಡನ್ನು ಬೌಲರ್ ಗಳು ಸಹಿ ಹಾಕಿ ತಮ್ಮ ಜೊತೆಗಿಟ್ಟುಕೊಳ್ಳುತ್ತಾರೆ. ಆದರೆ ಬುಮ್ರಾ ಈ ಬಾಲ್ ನ್ನು ತಮ್ಮ ಪುಟಾಣಿ ಮಗನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಬಿಳಿ ಜೆರ್ಸಿ ತೊಟ್ಟ ಅಂಗದ್ ತಂದೆ ಐತಿಹಾಸಿಕ ಸಾಧನೆ ಮಾಡಿದ ಚೆಂಡನ್ನು ಹಿಡಿದುಕೊಂಡಿರುವ ಫೋಟೋವನ್ನು ಸಂಜನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬುಮ್ರಾ ಟೀಂ ಇಂಡಿಯಾ ಕಂಡ ಶ್ರೇಷ್ಠ ವೇಗಿ. ಈಗ ಅವರ ಪುತ್ರನಂತೂ ತಂದೆಗೆ ತಕ್ಕ ಮಗನಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ENG vs Ind: ಧೋನಿ ದಾಖಲೆ ಮುರಿದು ಖುಷಿಯಲ್ಲಿದ್ದ ರಿಷಭ್ ಪಂತ್‌ ಬಿಗ್‌ ಶಾಕ್‌