Daily Horoscope

Select Your Language

Notifications

webdunia
webdunia
webdunia
webdunia

IPL 2026: ಸಿಎಸ್ ಕೆ ಅಭಿಮಾನಿಗಳಿಗೆ ಶಾಕ್ ಕೊಟ್ಟ ಧೋನಿ

Dhoni CSK IPL 2026
Photo Credit: X
ಚೆನ್ನೈ: ಐಪಿಎಲ್ 2026 ಕ್ಕೆ ಆರಂಭವಾಗುವ ಕೆಲವೇ ಕ್ಷಣಗಳು ಬಾಕಿಯಿರುವಾಗ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಶಾಕ್ ಸಿಕ್ಕಿದೆ. ಧೋನಿ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

ಐಪಿಎಲ್ 2026 ಕ್ಕೆ ಇಂದಿನಿಂದ ಚಾಲನೆ ಸಿಗುತ್ತಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್  ಹೈದರಾಬಾದ್ ಮುಖಾಮುಖಿಯಾಗಲಿದೆ. ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿದೆ.

ಸಿಎಸ್ ಕೆ ತನ್ನ ಮೊದಲ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ. ಈ ಪಂದ್ಯ ಸೋಮವಾರ ನಡೆಯಲಿದೆ. ಆದರೆ ಈ ಪಂದ್ಯಕ್ಕೆ ಮುನ್ನ ಧೋನಿ ಅಭಿಮಾನಿಗಳಿಗೆ ಶಾಕ್ ಸಿಕ್ಕಿದೆ. ಧೋನಿ ಆರಂಭದ ಎರಡು ವಾರದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ಸಿಎಸ್ ಕೆ ಪ್ರಕಟಣೆ ತಿಳಿಸಿದೆ.

ಧೋನಿ ಸ್ನಾಯು ಸೆಳೆತದಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರೀಗ ಪಂದ್ಯವಾಡುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಆರಂಭದ ಎರಡು ವಾರದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ಸಿಎಸ್ ಕೆ ಪ್ರಕಟಣೆ ತಿಳಿಸಿದೆ. ಧೋನಿ ಆಟವನ್ನು ವರ್ಷಕ್ಕೊಮ್ಮೆ ಐಪಿಎಲ್ ನಲ್ಲಿ ಮಾತ್ರ ನೋಡಲು ಸಾಧ್ಯವಾಗುತ್ತದೆ. ಅದಕ್ಕಾಗಿ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಆದರೆ ಈಗ ಅವರಿಗೆ ಗಾಯವಾಗಿದ್ದು ಅಭಿಮಾನಿಗಳಿಗೆ ತೀವ್ರ ನಿರಾಸೆ ತಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IPL 2026: ಐಪಿಎಲ್ ನಲ್ಲಿ ಮೊದಲ ಬಾಲ್ ಎದುರಿಸಿದ್ದು, ಮೊದಲ ಬಾಲ್ ಎಸೆದಿದ್ದು ಯಾರು ಗೊತ್ತಾ