Daily Horoscope

Select Your Language

Notifications

webdunia
webdunia
webdunia
webdunia

IPL 2026: ಐಪಿಎಲ್ ನಲ್ಲಿ ಮೊದಲ ಬಾಲ್ ಎದುರಿಸಿದ್ದು, ಮೊದಲ ಬಾಲ್ ಎಸೆದಿದ್ದು ಯಾರು ಗೊತ್ತಾ

Chinnaswamy ground
ಬೆಂಗಳೂರು: ಐಪಿಎಲ್ ನ ಮತ್ತೊಂದು ಸೀಸನ್ ಆರಂಭವಾಗುತ್ತಿದೆ. ಇದಕ್ಕೆ ಮೊದಲು ಐಪಿಎಲ್ ನಲ್ಲಿ ಮೊದಲ ಬಾಲ್ ಎದುರಿಸಿದವರು ಮತ್ತು ಮೊದಲ ಬಾಲ್ ಎಸೆದವರು ಯಾರು ಎಂಬ ಇಂಟ್ರೆಸ್ಟಿಂಗ್ ಸಂಗತಿ ತಿಳಿದುಕೊಳ್ಳಿ.
 

ಐಪಿಎಲ್ 2026 ಕ್ಕೆ ಇಂದಿನಿಂದ ಚಾಲನೆ ಸಿಗುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದೆ. ಐಪಿಎಲ್ ಮೊದಲ ಆವೃತ್ತಿ ಆರಂಭವಾಗಿದ್ದು 2008 ರಲ್ಲಿ. ಈ ಕೂಟದಲ್ಲಿ ಶೇನ್ ವಾರ್ನೆ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಕಪ್ ಗೆದ್ದುಕೊಂಡಿತ್ತು.

2008 ರ ಮೊದಲ ಆವೃತ್ತಿಯ ಮೊದಲ ಪಂದ್ಯ ನಡೆದಿದ್ದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ. ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿತ್ತು. ಈ ಸೀಸನ್ ನ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ಮೊದಲು ಬ್ಯಾಟಿಂಗ್ ಮಾಡಿತ್ತು.

ಸೌರವ್ ಗಂಗೂಲಿ ಓಪನರ್ ಆಗಿ ಮೊದಲು ಬ್ಯಾಟಿಂಗ್ ಮಾಡಿದ್ದರು. ಹೀಗಾಗಿ ಐಪಿಎಲ್ ನಲ್ಲಿ ಮೊದಲ ಎಸೆತ ಎದುರಿಸಿದ ಖ್ಯಾತಿ ಸೌರವ್ ಗಂಗೂಲಿ ಅವರದ್ದು. ಐಪಿಎಲ್ ನ ಮೊದಲ ಎಸೆತ ಎಸೆದ ಬೌಲರ್ ಎಂದರೆ ಪ್ರವೀಣ್ ಕುಮಾರ್. ಇದೇ ಪಂದ್ಯದಲ್ಲಿ ಗಂಗೂಲಿಗೆ ಮೊದಲ ಎಸೆತ ಎಸೆದಿದ್ದರು.

ಹೀಗಾಗಿ ಐಪಿಎಲ್ ನಲ್ಲಿ ಮೊದಲ ಎಸೆತ ಎದುರಿಸಿದ ಬ್ಯಾಟಿಗ ಎಂಬ ಹೆಗ್ಗಳಿಕೆ ಕೆಕೆಆರ್ ಪರ ಆಡುತ್ತಿದ್ದ ಸೌರವ್ ಗಂಗೂಲಿ ಅವರದ್ದಾಗಿದ್ದರೆ ಮೊದಲ ಬಾಲ್ ಎಸೆದ ಖ್ಯಾತಿ ಆರ್ ಸಿಬಿ ಪರ ಆಡುತ್ತಿದ್ದ ಪ್ರವೀಣ್ ಕುಮಾರ್ ಅವರದ್ದು.

Share this Story:

Follow Webdunia kannada

ಮುಂದಿನ ಸುದ್ದಿ

ಜಾಹೀರಾತು ಶೂಟಿಂಗ್ ನಲ್ಲಿ ಕ್ಯಾಚ್ ಬಿಟ್ಟ ಬಾಬರ್ ಅಜಮ್: ಫುಲ್ ಟ್ರೋಲ್ Video