Daily Horoscope

Select Your Language

Notifications

webdunia
webdunia
webdunia
webdunia

IPL 2026: ಆರ್ ಸಿಬಿ ವರ್ಸಸ್ ಸನ್ ರೈಸರ್ಸ್ ಹೈದರಾಬಾದ್ ಲೈವ್ ಎಲ್ಲಿ ವೀಕ್ಷಿಸಬೇಕು

Kohli RCB 2026
Photo Credit: X
ಬೆಂಗಳೂರು: ಐಪಿಎಲ್ 2026 ಕ್ಕೆ ಇಂದು ಚಾಲನೆ ಸಿಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಆರ್ ಸಿಬಿ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ಲೈವ್ ಎಲ್ಲಿ, ಎಷ್ಟು ಗಂಟೆಗೆ ವೀಕ್ಷಿಸಬೇಕು ಇಲ್ಲಿದೆ ವಿವರ.

ಕಳೆದ ಬಾರಿ ಚಾಂಪಿಯನ್ ಆಗಿ ಮೊದಲ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿದ್ದ ಆರ್ ಸಿಬಿ ಈ ಬಾರಿ ಹಾಲಿ ಚಾಂಪಿಯನ್ ಎಂಬ ಭಾರೀ ನಿರೀಕ್ಷೆಯೊಂದಿಗೆ ಕಣಕ್ಕಿಳಿಯುತ್ತಿದೆ. ಆರ್ ಸಿಬಿಗೆ ಈ ಬಾರಿ ಇಬ್ಬರು ಪ್ರಮುಖ ವೇಗಿಗಳ ಅನುಪಸ್ಥಿತಿ ಕಾಡುವ ಸಾಧ್ಯತೆಯಿದೆ.

ಟಿ20 ಪಂದ್ಯಗಳನ್ನು ಗೆಲ್ಲಲು ಆಲ್ ರೌಂಡರ್ ಗಳು ಮತ್ತು ಬೌಲರ್ ಗಳ ಸಹಯೋಗವೂ ಮುಖ್ಯ. ಈ ಬಾರಿ ಜೋಶ್ ಹೇಝಲ್ ವುಡ್, ಯಶ್ ದಯಾಳ್ ಅನುಪಸ್ಥಿತಿ ಆರ್ ಸಿಬಿಗೆ ಕಾಡಲಿದೆ. ಅದೂ ಹೈದರಾಬಾದ್ ನಂತಹ ಬ್ಯಾಟಿಂಗ್ ಸದೃಢವುಳ್ಳ ತಂಡಗಳ ವಿರುದ್ಧ ಬೌಲಿಂಗ್ ವಿಭಾಗ ಅತ್ಯುತ್ತಮ ಪ್ರದರ್ಶನ ನೀಡಬೇಕಿದೆ.

ಸನ್ ರೈಸರ್ಸ್ ಓಪನರ್ ಗಳಾದ ಇಶಾನ್ ಕಿಶನ್-ಅಭಿಷೇಕ್ ಶರ್ಮಾ ಬ್ಯಾಟಿಂಗ್ ತಡೆಯುವ ಸವಾಲು ಆರ್ ಸಿಬಿ ಬೌಲರ್ ಗಳಿಗಿದೆ. ಆದರೆ ಬೆಂಗಳೂರಿನ ಅಭಿಮಾನಿಗಳು ವಿರಾಟ್ ಕೊಹ್ಲಿ ಮೇಲೆ ಹೆಚ್ಚಿನ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಕೊಹ್ಲಿ ಅಬ್ಬರದ ಬ್ಯಾಟಿಂಗ್ ನಡೆಸಬಹುದು ಎಂಬ ನಿರೀಕ್ಷೆಯಲ್ಲಿದೆ. ಚಿನ್ನಸ್ವಾಮಿಯಲ್ಲಿ ಬ್ಯಾಟಿಂಗ್ ಸ್ನೇಹಿ ಪಿಚ್ ನಿರೀಕ್ಷಿಸಲಾಗಿದೆ. ಹೀಗಾಗಿ ಇಂದು ರನ್ ಹೊಳೆ ನಿರೀಕ್ಷಿಸಬಹುದಾಗಿದೆ. ಈ ಪಂದ್ಯ ರಾತ್ರಿ 7.30 ಕ್ಕೆ ಆರಂಭವಾಗಲಿದೆ. ಜಿಯೋ ಹಾಟ್ ಸ್ಟಾರ್ ಆಪ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

SRH ವಿರುದ್ಧದ ಪಂದ್ಯಾಟಕ್ಕೂ ಮುನ್ನಾ ಆರ್‌ಸಿಬಿಗೆ ದೊಡ್ಡ ಹೊಡೆತ