Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಓಪನರ್: ಮೊದಲ ಪಂದ್ಯಕ್ಕೆ ಆರ್ ಸಿಬಿ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ

RCB team 2026
Photo Credit: X
ಬೆಂಗಳೂರು: ಮಾರ್ಚ್ 28 ರಿಂದ ಐಪಿಎಲ್ 2026 ಆರಂಭವಾಗಲಿದ್ದು ಮೊದಲ ಪಂದ್ಯದಲ್ಲಿ ಆರ್ ಸಿಬಿ ಮತ್ತು ಸನ್ ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೆ ಆರ್ ಸಿಬಿ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಇಲ್ಲಿದೆ ಸಂಭಾವ್ಯ ತಂಡ.

ಉದ್ಘಾಟನಾ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಈ ಸುಮಾರು ಒಂದು ವರ್ಷದ ಬಳಿಕ ಚಿನ್ನಸ್ವಾಮಿ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿರುವುದು ಅಭಿಮಾನಿಗಳಿಗೆ ಖುಷಿಯ ಸಂಗತಿ. ಅದೂ ಉದ್ಘಾಟನಾ ಪಂದ್ಯವೇ ಬೆಂಗಳೂರಿನಲ್ಲಿ ನಡೆಯುತ್ತಿರುವುದು ವಿಶೇಷ.

ಕಳೆದ ಬಾರಿ ಆರ್ ಸಿಬಿ ಚಾಂಪಿಯನ್ ಆಗಿದ್ದರಿಂದ ಈ ವಿಶೇಷ ಗೌರವ ಸಿಕ್ಕಿದೆ. ಈ ಐಪಿಎಲ್ ನಲ್ಲಿಯೂ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಓಪನರ್ ಆಗಿ ಕಣಕ್ಕಿಳಿಯುವುದು ಖಚಿತವಾಗಿದೆ. ಅವರಿಗೆ ಜೋಡಿಯಾಗಿ ವಿಕೆಟ್ ಕೀಪರ್ ಬ್ಯಾಟಿಗ ಫಿಲ್ ಸಾಲ್ಟ್ ಇರಲಿದ್ದಾರೆ. ಕೆಕೆಆರ್ ತಂಡದಿಂದ ಆರ್ ಸಿಬಿಗೆ ಬಂದಿರುವ ವೆಂಕಟೇಶ್ ಅಯ್ಯರ್ ಅಥವಾ ಈಗಾಗಲೇ ಆರ್ ಸಿಬಿಯಲ್ಲಿರುವ ದೇವದತ್ತ ಪಡಿಕ್ಕಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು.

ಉಳಿದಂತೆ ಮಧ್ಯಮ ಕ್ರಮಾಂಕದಲ್ಲಿ ನಾಯಕ ರಜತ್ ಪಾಟೀದಾರ್, ಜಿತೇಶ್ ಶರ್ಮಾ, ಟಿಮ್ ಡೇವಿಡ್ ಬಲ ತುಂಬಲಿದ್ದಾರೆ. ಸದ್ಯಕ್ಕೆ ಆರ್ ಸಿಬಿಗೆ ಬೌಲರ್ ಗಳ ಕೊರತೆ ಕಾಡುವ ಸಾಧ್ಯತೆಯಿದೆ. ಜೋಶ್ ಹೇಝಲ್ ವುಡ್ ಗಾಯದಿಂದ ಕೆಲವು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಇತ್ತ ಯಶ್ ದಯಾಳ್ ರನ್ನು ಕೈ ಬಿಡಲಾಗಿದೆ. ಹೀಗಾಗಿ ವಿದೇಶೀ ಆಟಗಾರ ಜೇಕಬ್ ಡಫಿ ಮತ್ತು ದೇಶೀಯ ವೇಗಿ ಭುವನೇಶ್ವರ್ ಕುಮಾರ್ ಅವರ ಮೇಲೆ ತಂಡ ಅವಲಂಬಿತವಾಗಲಿದೆ. ಇನ್ನು ಆಲ್ ರೌಂಡರ್ ಆಗಿ ರೊಮಾರಿಯೊ ಶೆಫರ್ಡ್ ವೇಗಿಗಳಿಗೆ ಸಾಥ್ ನೀಡಬಹುದು. ಸ್ಪಿನ್ ವಿಭಾಗದಲ್ಲಿ ಸುಯಾಶ್ ಶರ್ಮಾ, ಕೃನಾಲ್ ಪಾಂಡ್ಯ ಇರಲಿದ್ದಾರೆ. ಕಳೆದ ಸೀಸನ್ ನಲ್ಲಿ ಈ ಇಬ್ಬರೂ ಉತ್ತಮ ಸ್ಪೆಲ್ ಎಸೆದಿದ್ದರು.

ಮೊದಲ ಪಂದ್ಯಕ್ಕೆ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಬಹುದು:
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ತ ಪಡಿಕ್ಕಲ್, ರಜತ್ ಪಾಟೀದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೇಕಬ್ ಡಫಿ, ಸುಯಾಶ್ ಶರ್ಮಾ.


Share this Story:

Follow Webdunia kannada

ಮುಂದಿನ ಸುದ್ದಿ

RCB vs SRH: ಕಾಲ್ತುಳಿತದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿಯ ಭದ್ರತೆಯಲ್ಲಿ ಭಾರೀ ಬದಲಾವಣೆ