Publish Date: Sat, 28 Mar 2026 (10:25 IST)
Updated Date: Sat, 28 Mar 2026 (10:30 IST)
ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟಿಗ ಬಾಬರ್ ಅಜಮ್ ಮೈದಾನದಲ್ಲಿ ಮಾತ್ರವಲ್ಲ, ಜಾಹೀರಾತು ಶೂಟಿಂಗ್ ನಲ್ಲೂ ಫೇಲ್ ಆಗಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು ಬಾಬರ್ ಟ್ರೋಲ್ ಗೊಳಗಾಗಿದ್ದಾರೆ.
ಪಾಕಿಸ್ತಾನ ಕ್ರಿಕೆಟಿಗ ಬಾಬರ್ ಅಜಮ್ ಇತ್ತೀಚೆಗೆ ಕಳಪೆ ಫಾರ್ಮ್ ನಲ್ಲಿದ್ದಾರೆ. ಕಿಂಗ್ ಎಂದು ಅವರ ಕೆಲವು ಅಭಿಮಾನಿಗಳು ಹೇಳಿಕೊಳ್ಳುತ್ತಾರೆ. ಇನ್ನು ಕೆಲವರಂತೂ ವಿರಾಟ್ ಕೊಹ್ಲಿಗೆ ಹೋಲಿಸುವುದೂ ಇದೆ. ಆದರೆ ಪ್ರದರ್ಶನ ಮಾತ್ರ ಬಿಗ್ ಝೀರೋ.
ಇದೀಗ ಪಿಎಸ್ಎಲ್ ಕ್ರಿಕೆಟ್ ಲೀಗ್ ಗೆ ಮುನ್ನ ಬಾಬರ್ ಅಜಮ್ ಜಾಹೀರಾತು ಶೂಟಿಂಗ್ ಒಂದರಲ್ಲಿ ಭಾಗಿಯಾಗಿದ್ದಾರೆ. ಮೈದಾನದಲ್ಲಿ ಬೆಡ್ ಹಾಕಿ ಹಾರಿ ಕ್ಯಾಚ್ ಪಡೆಯುವ ಸನ್ನಿವೇಶವೊಂದರ ಚಿತ್ರೀಕರಣವನ್ನು ಮಾಡಲಾಗುತ್ತಿತ್ತು. ಕ್ಯಾಮರಾ ರೋಲ್ ಆಗುತ್ತಿತ್ತು.
ಆಕ್ಷನ್ ಹೇಳುವಾಗ ಬಾಬರ್ ಹಾರಿ ಚೆಂಡನ್ನು ಕ್ಯಾಚ್ ಹಿಡಿಯಬೇಕಾಗಿತ್ತು. ಆದರೆ ಬಾಬರ್ ಜಾಹೀರಾತು ಶೂಟಿಂಗ್ ನಲ್ಲೂ ಸಾಮಾನ್ಯ ಬಾಲ್ ಒಂದನ್ನು ಹಿಡಿಯಲು ವಿಫಲವಾಗಿದ್ದು ಬೆಡ್ ಮೇಲೆ ಬಿದ್ದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು, ಜಾಹೀರಾತಿನಲ್ಲೂ ಆಡಲು ಲಾಯಕ್ಕಿಲ್ಲ ಎಂದು ಟ್ರೋಲ್ ಮಾಡಿದ್ದಾರೆ.