ಚೆನ್ನೈ: ಇಷ್ಟು ವರ್ಷಗಳಿಂದ ಜೊತೆಗಿದ್ದ ನೆಚ್ಚಿನ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತೊರೆದು ರಾಜಸ್ಥಾನ್ ರಾಯಲ್ಸ್ ಸೇರಲು ರವೀಂದ್ರ ಜಡೇಜಾಗೆ ದೊಡ್ಡ ಆಫರ್ ನೀಡಲಾಗಿದೆಯಂತೆ.
ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರನಾಗಿದ್ದ ರವೀಂದ್ರ ಜಡೇಜಾರನ್ನು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಬಿಟ್ಟುಕೊಡಲು ಚೆನ್ನೈ ಮುಂದಾಗಿದೆ. ಅದರ ಬದಲಿಗೆ ರಾಜಸ್ಥಾನ್ ನಿಂದ ಸಂಜು ಸ್ಯಾಮ್ಸನ್ ರನ್ನು ಕರೆಸಿಕೊಳ್ಳಲು ಡೀಲ್ ಮಾಡಿಕೊಳ್ಳಲಿ.ದೆ
ಇಷ್ಟು ವರ್ಷ ಜೊತೆಗಿದ್ದ ಜಡೇಜಾರನ್ನು ಬಿಟ್ಟುಕೊಡಲು ಚೆನ್ನೈ ಹೇಗೆ ಮನಸ್ಸು ಮಾಡಿತು? ಧೋನಿ ಒಪ್ಪಿದರಾ? ಜಡೇಜಾ ಮನಸ್ಸು ಮಾಡಿದ್ರಾ ಎಂದೆಲ್ಲಾ ಅಭಿಮಾನಿಗಳು ಪ್ರಶ್ನಿಸುತ್ತಿದ್ದರು. ಆದರೆ ಈಗ ಜಡೇಜಾ ತೊರೆಯಲು ಒಪ್ಪಿರುವುದಕ್ಕೂ ಕಾರಣ ಬಯಲಾಗಿದೆ.
ರಾಜಸ್ಥಾನ್ ತಂಡಕ್ಕೆ ಸೇರ್ಪಡೆಯಾದರೆ ಜಡೇಜಾಗೆ ತಂಡದ ನಾಯಕತ್ವ ನೀಡುವ ಆಫರ್ ನೀಡಲಾಗಿದೆಯಂತೆ. ಚೆನ್ನೈ ತಂಡದಲ್ಲಂತೂ ಅವರಿಗೆ ನಾಯಕತ್ವ ಸಿಗುವ ಲಕ್ಷಣವಿಲ್ಲ. ಹೀಗಾಗಿ ರಾಜಸ್ಥಾನ್ ತಂಡಕ್ಕೆ ಹೋಗಿ ಕ್ಯಾಪ್ಟನ್ ಆಗುವ ಕನಸು ಈಡೇರಿಸಿಕೊಳ್ಳಲಿದ್ದಾರೆ.