Webdunia - Bharat's app for daily news and videos

Install App

IPL 2024: ಆರ್ ಸಿಬಿ ಮಾಜಿ ಪ್ಲೇಯರ್ ಕೇದಾರ್ ಜಾಧವ್ ಗೆ ಬೇಡಿಕೆಯೇ ಇಲ್ಲ

Webdunia
ಬುಧವಾರ, 13 ಡಿಸೆಂಬರ್ 2023 (13:10 IST)
ಮುಂಬೈ: ಐಪಿಎಲ್ 2024 ರ ಮಿನಿ ಹರಾಜು ಪ್ರಕ್ರಿಯೆಗೆ ಕೆಲವೇ ದಿನಗಳು ಬಾಕಿಯಿದ್ದು, ಆರ್ ಸಿಬಿ ಮಾಜಿ ಆಟಗಾರ ಕೇದಾರ್ ಜಾಧವ್ ಕೊಳ್ಳುವವರೇ ಇಲ್ಲದೇ ಹೊರಬಿದ್ದಿದ್ದಾರೆ.

ಐಪಿಎಲ್ ಮಿನಿ ಹರಾಜು ಪ್ರಕ್ರಿಯೆಗೆ ಮುನ್ನ ಹರಾಜಿಗೊಳಗಾಗಲಿರುವ 333 ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಈ ಪಟ್ಟಿಯಲ್ಲಿ ಕೇದಾರ್ ಜಾಧವ್ ಹೆಸರು ಕೈಬಿಡಲಾಗಿದೆ.

ಕೇದಾರ್ ಜಾಧವ್ 2009 ರಿಂದ ಐಪಿಎಲ್ ಟೂರ್ನಿಯಲ್ಲಿದ್ದಾರೆ. ಆರ್ ಸಿಬಿ ಪರ ಅಭಿಯಾನ ಆರಂಭಿಸಿ ಬಳಿಕ ಡೆಲ್ಲಿ ಕ್ಯಾಪಿಟಲ್ಸ್, ಕೊಚ್ಚಿ ಟಸ್ಕರ್ಸ್, ಸನ್ ರೈಸರ್ಸ್ ಹೈದರಾಬಾದ್, ಸಿಎಸ್ ಕೆ ಪರವೂ ಐಪಿಎಲ್ ಆಡಿದ್ದರು. ಒಟ್ಟು 92 ಐಪಿಎಲ್ ಪಂದ್ಯಗಳಾಡಿರುವ ಜಾಧವ್ ಗಳಿಸಿದ್ದು ಕೇವಲ 1182 ರನ್.

ಇದುವರೆಗೆ ಐಪಿಎಲ್ ನಲ್ಲಿ ಅವರಿಂದ ಹೇಳಿಕೊಳ್ಳುವಂತಹ ಇನಿಂಗ್ಸ್ ಬಂದಿಲ್ಲ. ಹೀಗಾಗಿ ಅವರನ್ನು ಕೊಳ್ಳುವವರೇ ಇಲ್ಲವಾಗಿದೆ. ಹೀಗಾಗಿ ಅಂತಿಮ ಪಟ್ಟಿಯಿಂದ ಅವರ ಹೆಸರನ್ನು ಕೈ ಬಿಡಲಾಗಿದೆ. ಮೂಲತಃ ಜಾಧವ್ ಗೆ 2 ಕೋಟಿ ರೂ. ಮೂಲಧನವಿತ್ತು. ಆದರೆ ಯಾವುದೇ ಫ್ರಾಂಚೈಸಿಗಳೂ ಆಸಕ್ತಿ ತೋರದೇ ಇರುವುದರಿಂದ ಅವರನ್ನು ಕೈ ಬಿಡಲಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಆ್ಯಂಡ್ರೆ ರಸೆಲ್

IND vs ENG: ರಿಷಭ್ ಪಂತ್ ಗಾಯ ಹೇಗಿದೆ, ಮುಂದಿನ ಪಂದ್ಯದಲ್ಲಿ ಆಡ್ತಾರಾ

ಮೂರನೇ ಟೆಸ್ಟ್‌ನ ಕೊನೆಯಲ್ಲಿ ಸಿರಾಜ್‌ ಔಟಾದಾಗ ಏನನ್ನಿಸಿತು: ಶುಭಮನ್‌ ಗಿಲ್‌ಗೆ ಕಿಂಗ್ಸ್‌ ಚಾರ್ಲ್ಸ್‌ ಪ್ರಶ್ನೆ

IND vs ENG: ಹಾರ್ಟ್ ಬ್ರೇಕ್ ನಂತರ ಟೀಂ ಇಂಡಿಯಾ ಮುಂದಿನ ಟೆಸ್ಟ್ ಪಂದ್ಯ ಯಾವಾಗ, ಎಲ್ಲಿ

ಮುಂದಿನ ಸುದ್ದಿ
Show comments