Publish Date: Tue, 19 Dec 2023 (08:21 IST)
Updated Date: Tue, 19 Dec 2023 (08:42 IST)
ದುಬೈ: ಐಪಿಎಲ್ 2024 ರ ಮಿನಿ ಹರಾಜು ಪ್ರಕ್ರಿಯೆ ಇಂದು ದುಬೈನ ಕೋಕಾ ಕೋಲಾ ಅರೇನಾದಲ್ಲಿ ನಡೆಯಲಿದೆ. ಒಟ್ಟು 333 ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ.
214 ಭಾರತೀಯ ಆಟಗಾರರು ಮತ್ತು 119 ವಿದೇಶೀ ಆಟಗಾರರ ಐಪಿಎಲ್ ಭವಿಷ್ಯ ಇಂದು ಗೊತ್ತಾಗಲಿದೆ. ಈ ಬಾರಿ 20 ಕೋಟಿ ರೂ.ವರೆಗೆ ಬಿಡ್ಡಿಂಗ್ ನಡೆದು ದಾಖಲೆಯಾಗಲಿದೆ ಎಂಬ ನಿರೀಕ್ಷೆಯಿದೆ.
ಭಾರತೀಯ ಕಾಲಮಾನ ಪ್ರಕಾರ ಹರಾಜು ಪ್ರಕ್ರಿಯೆ ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್, ಹಾಟ್ ಸ್ಟಾರ್ ಆಪ್ ಗಳಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ. ಜೊತೆಗೆ ಜಿಯೋ ಸಿನಿಮಾದಲ್ಲೂ ಲೈವ್ ಅಪ್ ಡೇಟ್ ಸಿಗಲಿದೆ.
ಒಟ್ಟು 10 ಫ್ರಾಂಚೈಸಿಗಳಿದ್ದು, ಇವುಗಳಲ್ಲಿ ಕೇವಲ 77 ಸ್ಥಾನಗಳು ಮಾತ್ರ ಬಾಕಿಯಿವೆ. ಹೀಗಾಗಿ 333 ಆಟಗಾರರ ಪೈಕಿ ಕೇವಲ 77 ಆಟಗಾರರಿಗೆ ಮಾತ್ರ ಅವಕಾಶ ಸಿಗಲಿದೆ. ಹೀಗಾಗಿ ಎಲ್ಲಾ ಆಟಗಾರರಿಗೆ ಅವಕಾಶ ಸಿಗದು.