ಮುಂಬೈ: ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತನ್ನ ಯಶಸ್ವೀ ನಾಯಕ ರೋಹಿತ್ ಶರ್ಮಾರನ್ನು ಕಿತ್ತು ಹಾಕಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದ್ದು ಹಲವರಿಗೆ ಶಾಕ್ ನೀಡಿದೆ.
ಮೊದಲು ಮುಂಬೈ ತಂಡದಲ್ಲಿದ್ದ ಹಾರ್ದಿಕ್ ಬಳಿಕ ಗುಜರಾತ್ ನಾಯಕರಾಗಿ ಎರಡು ವರ್ಷ ಐಪಿಎಲ್ ಆಡಿದ್ದರು. ಈ ವೇಳೆ ನಾಯಕ ರೋಹಿತ್ ಶರ್ಮಾ ಸ್ಥಾನದ ಮೇಲೆ ಇಬ್ಬರಿಗೆ ಕಣ್ಣಿತ್ತು. ಅವರೆಂದರೆ ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್.
ಸೂರ್ಯ ಕಳೆದ ಸೀಸನ್ ನಲ್ಲಿ ಮುಂಬೈ ನಾಯಕರಾಗಿಯೂ ಕೆಲವು ಪಂದ್ಯದಲ್ಲಿ ಕಾರ್ಯನಿರ್ವಹಿಸಿದ್ದರು. ಹೀಗಾಗಿ ಮುಂಬೈಗೆ ಮುಂದಿನ ನಾಯಕ ಪಟ್ಟ ತಮಗೇ ಸಿಗಬಹುದು ಎಂದು ಈ ಇಬ್ಬರೂ ಲೆಕ್ಕಾಚಾರ ಹಾಕಿದ್ದರು. ಆದರೆ ಯಾವಾಗ ಹಾರ್ದಿಕ್ ರನ್ನು ಫ್ರಾಂಚೈಸಿ ಮರಳಿ ತಂಡಕ್ಕೆ ಕರೆಯಿಸಿಕೊಂಡಿತೋ ಆಗ ಬುಮ್ರಾಗೆ ತಮ್ಮ ಸ್ಥಾನಕ್ಕೆ ಕುತ್ತು ಬಂದಿತು ಎಂಬ ವಾಸನೆ ಬಡಿದಿತ್ತು. ಈ ಕಾರಣಕ್ಕೇ ಅವರು ಇನ್ ಸ್ಟಾಗ್ರಾಂನಲ್ಲಿ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು.
ಹಾಗಿದ್ದರೂ ರೋಹಿತ್ ಶರ್ಮಾರನ್ನು ಇದೇ ಐಪಿಎಲ್ ನಲ್ಲೇ ನಾಯಕತ್ವದಿಂದ ಹೊರಹಾಕಿದ್ದು ಸೂರ್ಯಕುಮಾರ್ ಯಾದವ್ ಗೂ ಶಾಕ್ ನೀಡಿದೆ. ಹೀಗಾಗಿ ಇಬ್ಬರೂ ನಾಯಕತ್ವ ಪಟ್ಟದ ಆಕಾಂಕ್ಷಿಗಳಾಗಿದ್ದವರಿಗೆ ತೀವ್ರ ನಿರಾಸೆಯಾಗಿದೆ.