ಮುಂಬೈ: ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕಿತ್ತು ಹಾಕಿದ ಮೇಲೆ ಅವರಿಗೆ ಡಿಮ್ಯಾಂಡ್ ಹೆಚ್ಚಾಗಿದೆ!
ರೋಹಿತ್ ಐಪಿಎಲ್ ನ ಅತ್ಯಂತ ಯಶಸ್ವೀ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ಅವರು ಗೆದ್ದಿರುವ ಐದು ಐಪಿಎಲ್ ಟ್ರೋಫಿಗಳೇ ಸಾಕ್ಷಿ. ಟೀಂ ಇಂಡಿಯಾ ನಾಯಕರಾಗಿಯೂ ರೋಹಿತ್ ಉತ್ತಮ ದಾಖಲೆ ಹೊಂದಿದ್ದಾರೆ.
ಸ್ವತಃ ಬಿಗ್ ಹಿಟ್ಟರ್ ಕೂಡಾ ಆಗಿರುವುದರಿಂದ ರೋಹಿತ್ ಗೆ ಐಪಿಎಲ್ ನಲ್ಲಿ ಭಾರೀ ಬೇಡಿಕೆಯಿದೆ. ಇದೀಗ ಮುಂಬೈ ತಂಡ ನಾಯಕತ್ವದಿಂದ ರೋಹಿತ್ ರನ್ನು ಕಿತ್ತು ಹಾಕಿದ ಮೇಲೆ ಅವರಿಗೆ ಡಿಮ್ಯಾಂಡ್ ಹೆಚ್ಚಿದೆ. ಬೇರೆ ಫ‍್ರಾಂಚೈಸಿಗಳು ಮುಂದಿನ ದಿನಗಳಲ್ಲಿ ರೋಹಿತ್ ರನ್ನು ತಮ್ಮ ತಂಡಕ್ಕೆ ಕರೆಯಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.
ಟ್ರೇಡಿಂಗ್ ವಿಂಡೋ ಸಮಯದಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಗೆ ಈ ಸುಳಿವು ಸಿಕ್ಕಿತ್ತು. ಹೀಗಾಗಿ ರೋಹಿತ್ ರನ್ನು ತಮಗೆ ನೀಡುವಂತೆ ಕೇಳಿಕೊಂಡಿತ್ತು. ಆದರೆ ಮುಂಬೈ ನಿರಾಕರಿಸಿತ್ತು. ಡೆಲ್ಲಿ ಮಾತ್ರವಲ್ಲದೆ, ಬೇರೆ ತಂಡಗಳೂ ರೋಹಿತ್ ರನ್ನು ತಮ್ಮ ತಂಡಕ್ಕೆ ಕರೆತಂದು ನಾಯಕ ಪಟ್ಟ ನೀಡಲು ಆಫರ್ ನೀಡುತ್ತಿದೆಯಂತೆ. ಮುಂದಿನ ದಿನಗಳಲ್ಲಿ ರೋಹಿತ್ ಬೇರೆ ತಂಡದ ಪಾಲಾದರೂ ಅಚ್ಚರಿಯಿಲ್ಲ.