Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಮಾರಾಟವಾಗದೇ ಉಳಿಯಬಹುದಾದ ಕ್ರಿಕೆಟಿಗರ ಪಟ್ಟಿ

ಐಪಿಎಲ್ 2024: ಮಾರಾಟವಾಗದೇ ಉಳಿಯಬಹುದಾದ ಕ್ರಿಕೆಟಿಗರ ಪಟ್ಟಿ
ಮುಂಬೈ , ಸೋಮವಾರ, 18 ಡಿಸೆಂಬರ್ 2023 (14:01 IST)
ಮುಂಬೈ: ಐಪಿಎಲ್ 2024 ರ ಮಿನಿ ಹರಾಜು ಪ್ರಕ್ರಿಯೆ ಮುಂದಿನ ವಾರ ದುಬೈನಲ್ಲಿ ನಡೆಯಲಿದೆ. ಈಗ ಹರಾಜಿಗೊಳಪಡಲಿರುವ ಆಟಗಾರರ ಪಟ್ಟಿ ಬಿಡುಗಡೆಯಾಗಿದೆ.

ಈ ಪೈಕಿ ಹಲವು ಘಟಾನುಘಟಿ ಆಟಗಾರರು 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಹರಾಜಿಗೊಳಪಡಲಿದ್ದಾರೆ. ಇವರಲ್ಲಿ ಆಸ್ಟ್ರೇಲಿಯಾ ಮೂಲದ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆ ಪೈಕಿ ಹರಾಜಿನಲ್ಲಿ ಮಾರಾಟವಾಗದೇ ಇರಬಹುದಾದ ಆಟಗಾರರು ಯಾರಿರಬಹುದು ಎಂದು ನೋಡೋಣ.

ಒಟ್ಟು 25 ಆಟಗಾರರು 2 ಕೋಟಿ ರೂ. ಮೂಲಬೆಲೆಯೊಂದಿಗೆ ಹರಾಜು ಕಣದಲ್ಲಿದ್ದಾರೆ. ಈ ಪೈಕಿ ಕೆಲವು ಆಟಗಾರರಿಗೆ ಅದೃಷ್ಟ ಖುಲಾಯಿಸದೇ ಇರಬಹುದು.

ಅಂತಹ ಆಟಗಾರರೆಂದರೆ ಪ್ಯಾಟ್ ಕ್ಯುಮಿನ್ಸ್, ಶಾರ್ದೂಲ್ ಠಾಕೂರ್, ಹರ್ಷಲ್ ಪಟೇಲ್, ಟ್ರಾವಿಸ್ ಹೆಡ್, ಜೋಶ್ ಹೇಝಲ್ ವುಡ್, ಡೇವಿಡ್ ವಿಲ್ಲಿ, ಸ್ಟೀವ್ ಸ್ಮಿತ್, ಉಮೇಶ್ ಯಾದವ್, ಸೀನ್ ಅಬೋಟ್, ಜೋಶ್ ಇಂಗ್ಲಿಸ್, ಲೂಕಿ ಫರ್ಗ್ಯುಸನ್, ಆಂಜಲೋ ಮ್ಯಾಥ್ಯೂಸ್, ಕ್ರಿಸ್ ವೋಕ್ಸ್. ಈ ಆಟಗಾರರನ್ನು ಯಾವುದೇ ಫ್ರಾಂಚೈಸಿಗಳೂ ಖರೀದಿಸದೇ ಇರುವ ಸಾಧ‍್ಯತೆಯಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IPL 2024: ಐಪಿಎಲ್ ಮಿನಿ ಹರಾಜು ಹರಾಜುಗಾರ್ತಿ ಈ ಸುಂದರಿ!