Select Your Language

Notifications

webdunia
webdunia
webdunia
webdunia

ಐಪಿಎಲ್ 2024 ಮಿನಿ ಹರಾಜು: ಯಾವ ತಂಡ ಎಷ್ಟು ಆಟಗಾರರನ್ನು ಖರೀದಿಸಬಹುದು?

ಐಪಿಎಲ್ 2024 ಮಿನಿ ಹರಾಜು: ಯಾವ ತಂಡ ಎಷ್ಟು ಆಟಗಾರರನ್ನು ಖರೀದಿಸಬಹುದು?
ದುಬೈ , ಮಂಗಳವಾರ, 19 ಡಿಸೆಂಬರ್ 2023 (08:40 IST)
ದುಬೈ: ಬಹುನಿರೀಕ್ಷಿತ ಐಪಿಎಲ್ 2024 ಮಿನಿ ಹರಾಜು ಪ್ರಕ್ರಿಯೆ ಇನ್ನೇನು ಕೆಲವೇ ಗಂಟೆಗಳಲ್ಲಿ ಆರಂಭವಾಗಿದೆ. 333 ಆಟಗಾರರ ಪೈಕಿ 77 ಆಟಗಾರರಿಗೆ ಅವಕಾಶ ಸಿಗಲಿದೆ. ಯಾವ ತಂಡ ಎಷ್ಟು ಆಟಗಾರರನ್ನು ಖರೀದಿ ಮಾಡಬಹುದು ನೋಡೋಣ.

ಆರ್ ಸಿಬಿ: ಬೆಂಗಳೂರು ತಂಡದಲ್ಲಿ 6 ಸ್ಥಾನಗಳು ಖಾಲಿಯಿದ್ದು 3 ವಿದೇಶೀ ಮತ್ತು 3 ದೇಶೀಯ ಆಟಗಾರರನ್ನು ಮಾತ್ರ ಖರೀದಿ ಮಾಡಬಹುದಾಗಿದೆ.
ಸಿಎಸ್ ಕೆ: ಧೋನಿ ತಂಡದಲ್ಲೂ 6 ಸ್ಥಾನ ಖಾಲಿಯಿದ್ದು, ಮೂವರು ದೇಶೀಯ ಮತ್ತು 3 ವಿದೇಶೀ ಆಟಗಾರರನ್ನು ಖರೀದಿಸಬಹುದು.
ಸನ್ ರೈಸರ್ಸ್ ಹೈದರಾಬಾದ್: ಈ ತಂಡದಲ್ಲೂ 6 ಸ್ಥಾನ ಖಾಲಿಯಿದೆ. 3 ಭಾರತೀಯ ಮತ್ತು 3 ವಿದೇಶೀ ಆಟಗಾರರನ್ನು ಖರೀದಿಸಬಹುದು.
ಮುಂಬೈ ಇಂಡಿಯನ್ಸ್: ಗರಿಷ್ಠ ಚಾಂಪಿಯನ್ ತಂಡದಲ್ಲಿ 8 ಸ್ಲಾಟ್ ಖಾಲಿಯಿದ್ದು, ನಾಲ್ವರು ಭಾರತೀಯ ಮತ್ತು ನಾಲ್ವರು ವಿದೇಶೀ ಆಟಗಾರರನ್ನು ಖರೀದಿಸಬಹುದು.
ಗುಜರಾತ್ ಟೈಟನ್ಸ್:  ಗುಜರಾತ್ ಗೆ ಒಟ್ಟು 8 ಆಟಗಾರರು ಬೇಕಾಗಿದ್ದಾರೆ. ಈ ಪೈಕಿ 6 ಭಾರತೀಯ ಮತ್ತು ಇಬ್ಬರು ವಿದೇಶೀ ಆಟಗಾರರನ್ನು ಖರೀದಿಸಬಹುದು.
ಕೆಕೆಆರ್: ಇಲ್ಲಿ ಬರೋಬ್ಬರಿ 12 ಸ್ಲಾಟ್ ಖಾಲಿಯಿದೆ. ಈ ಪೈಕಿ 8 ಭಾರತೀಯ ಮತ್ತು ನಾಲ್ವರು ವಿದೇಶೀ ಆಟಗಾರರನ್ನು ಖರೀದಿಸಬೇಕಾಗುತ್ತದೆ.
ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ ತಂಡದಲ್ಲಿ ಆರು ಸ್ಥಾನ ಖಾಲಿಯಿದ್ದು, ನಾಲ್ವರು ಭಾರತೀಯ ಮತ್ತು ಇಬ್ಬರು ವಿದೇಶೀ ಆಟಗಾರರನ್ನು ಖರೀದಿಸಬಹುದು.
ರಾಜಸ್ಥಾನ್ ರಾಯಲ್ಸ್: ಈ ತಂಡದಲ್ಲಿ ಖಾಲಿಯಿರುವ ಸ್ಲಾಟ್ ಗಳು 8. ಈ ಪೈಕಿ ಮೂವರು ವಿದೇಶೀ ಮತ್ತು ಐವರು ಭಾರತೀಯ ಆಟಗಾರರನ್ನು ಖರೀದಿಸಬಹುದು.
ಡೆಲ್ಲಿ ಕ್ಯಾಪಿಟಲ್ಸ್: ಈ ತಂಡಕ್ಕೆ 9 ಆಟಗಾರರು ಬೇಕು. ಈ ಪೈಕಿ ಐವರು ಭಾರತೀಯ ಮತ್ತು ನಾಲ್ವರು ವಿದೇಶೀ ಆಟಗಾರರನ್ನು ಖರೀದಿಸಬಹುದು.
ಕಿಂಗ್ಸ್ ಪಂಜಾಬ್: 8 ಸ್ಥಾನ ಖಾಲಿಯಿದ್ದು, ಆರು ಭಾರತೀಯ ಮತ್ತು ಇಬ್ಬರು ವಿದೇಶೀ ಆಟಗಾರರನ್ನು ಖರೀದಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

IPL 2024 Auction: ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ಇಂದು, ನೇರಪ್ರಸಾರ ಡೀಟೈಲ್ಸ್