ಬೆಂಗಳೂರು: ಐಪಿಎಲ್ 2023 ರಲ್ಲಿ ಲಕ್ನೋ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಯ ಎಸೆತದಲ್ಲಿ ಸೋಲು ಕಂಡಿತು. 
									
			
			 
 			
 
 			
			                     
							
							
			        							
								
																	ಕೊನೆಯ ಓವರ್ ನಲ್ಲಿ ಲಕ್ನೋ ಗೆಲುವಿಗೆ 4 ರನ್ ಬೇಕಾಗಿತ್ತು. ಆಗಲೇ 7 ವಿಕೆಟ್ ಕಳೆದುಕೊಂಡಿತ್ತು. ಕೊನೆಯ ಓವರ್ ನಲ್ಲಿ ಹರ್ಷಲ್ ಪಟೇಲ್ 2 ವಿಕೆಟ್ ಕಿತ್ತು ಆತಂಕ ಮೂಡಿಸಿದ್ದರು. ಹಾಗಿದ್ದರೂ ಕೊನೆಯ ಎಸೆತದಲ್ಲಿ ಲಕ್ನೋಗೆ 1 ರನ್, ಆರ್ ಸಿಬಿಗೆ 1 ವಿಕೆಟ್ ಬೇಕಾಗಿತ್ತು.
									
										
								
																	ಈ ಸಂದರ್ಭದಲ್ಲಿ ಬೌಲರ್ ಹರ್ಷಲ್ ಪಟೇಲ್ ಗೆ ವಿರಾಟ್ ಕೊಹ್ಲಿ ನಾನ್ ಸ್ಟ್ರೈಕರ್ ನಲ್ಲಿದ್ದ ಲಕ್ನೋ ಬ್ಯಾಟಿಗನನ್ನು ಮಂಕಡ್ ಔಟ್ ಮಾಡಲು ಸಲಹೆ ನೀಡಿದರು. ಅದರಂತೆ ಹರ್ಷಲ್ ಮಂಕಡ್ ಔಟ್ ಔಟ್ ಮಾಡಲೆತ್ನಿಸಿದರೂ ಅಂಪಾಯರ್ ಔಟ್ ನೀಡಲು ನಿರಾಕರಿಸಿದರು. ಬ್ಯಾಟಿಗ ಕ್ರೀಸ್ ನೊಳಗೇ ಇದ್ದ ಎಂಬ ಕಾರಣಕ್ಕೆ ಕೊಹ್ಲಿ ನೀಡಿದ್ದ ಮಂಕಡ್ ಔಟ್ ಸಲಹೆ ವರ್ಕೌಟ್ ಆಗಲಿಲ್ಲ. ಲಕ್ನೋಗೆ 1 ವಿಕೆಟ್ ನ ಜಯವೂ ಸಿಕ್ಕಿತ್ತು. ಆದರೆ ಲಕ್ನೋ ಫ್ಯಾನ್ಸ್ ಈಗ ಕೊಹ್ಲಿಯ ಸಲಹೆಗೆ ಶೇಮ್ ಎಂದಿದ್ದಾರೆ.