Publish Date: Mon, 10 Apr 2023 (21:13 IST)
Updated Date: Mon, 10 Apr 2023 (21:19 IST)
ಬೆಂಗಳೂರು: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 2 ವಿಕೆಟ್ 212 ನಷ್ಟಕ್ಕೆ ರನ್ ಗಳಿಸಿದೆ.
ತವರಿನಲ್ಲಿ ತಾನು ಹುಲಿ ಎಂದು ಆರ್ ಸಿಬಿ ಮತ್ತೆ ಸಾಬೀತುಪಡಿಸಿದೆ. ಆರಂಭಿಕರಾಗಿ ಕಣಕ್ಕಿಳಿದ ಕೊಹ್ಲಿ-ಫಾ ಡು ಪ್ಲೆಸಿಸ್ ಶತಕದ ಜೊತೆಯಾಟವಾಡಿದರು. ಕೊಹ್ಲಿ 44 ಎಸೆತಗಳಿಂದ 61 ರನ್ ಗಳಿಸಿ ಔಟಾದರು. ಫಾ ಡು ಪ್ಲೆಸಿಸ್ 46 ಎಸೆತಗಳಿಂದ 79 ರನ್ ಚಚ್ಚಿದರು.
ಕೊಹ್ಲಿ ಔಟಾದ ಬಳಿಕ ಪ್ಲೆಸಿಸ್ ಗೆ ಜೊತೆಯಾದ ಗ್ಲೆನ್ ಮ್ಯಾಕ್ಸ್ ವೆಲ್ ತಮ್ಮ ಬ್ಯಾಟಿಂಗ್ ಹಬ್ಬ ಶುರು ಮಾಡಿದರು. ಮ್ಯಾಕ್ಸಿ 29 ಎಸೆತ ಎದುರಿಸಿ 59 ರನ್ ಗಳಿಸಿದರು. ಇದರಿಂದಾಗಿ ಆರ್ ಸಿಬಿ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು.