Select Your Language

Notifications

webdunia
webdunia
webdunia
webdunia

ಐಪಿಎಲ್ 2023: ಸಚಿನ್ ಪುತ್ರ ಎನ್ನುವ ಕಾರಣಕ್ಕೆ ಅರ್ಜುನ್ ಗೆ ದುರಾದೃಷ್ಟ?!

ಐಪಿಎಲ್ 2023: ಸಚಿನ್ ಪುತ್ರ ಎನ್ನುವ ಕಾರಣಕ್ಕೆ ಅರ್ಜುನ್ ಗೆ ದುರಾದೃಷ್ಟ?!
ಮುಂಬೈ , ಸೋಮವಾರ, 10 ಏಪ್ರಿಲ್ 2023 (08:40 IST)
ಮುಂಬೈ: ಐಪಿಎಲ್ ನಲ್ಲಿ ಕಳೆದ ಎರಡು ಸೀಸನ್ ಗಳಿಂದ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಮುಂಬೈ ಇಂಡಿಯನ್ಸ್ ತಂಡ ಪ್ರತಿನಿಧಿಸುತ್ತಿದ್ದಾರೆ.

ಆದರೆ ಇದುವರೆಗೆ ಅರ್ಜುನ್ ಗೆ ಆಡುವ ಬಳಗದಲ್ಲಿ ಅವಕಾಶ ಸಿಕ್ಕಿಲ್ಲ. ಕೇವಲ ನೆಟ್ ಬೌಲರ್ ಆಗಿ ಮಾತ್ರ ಬಳಕೆಯಾಗುತ್ತಿದ್ದಾರೆ. ಕಳೆದ ಸೀಸನ್ ನಲ್ಲಿಯೇ ಅರ್ಜುನ್ ಗೆ ಅವಕಾಶ ನೀಡಬೇಕೆಂಬ ಕೂಗು ಕೇಳಿಬಂದಿತ್ತು. ಆದರೆ ಸಿಕ್ಕಿರಲಿಲ್ಲ.

ಈ ಬಾರಿಯೂ ಎರಡು ಪಂದ್ಯಗಳಲ್ಲಿ ಅವಕಾಶ ಸಿಕ್ಕಿಲ್ಲ. ಹೀಗಾಗಿ ನೆಟ್ಟಿಗರು ಮುಂಬೈ ಇಂಡಿಯನ್ ತಂಡವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಸಚಿನ್ ಪುತ್ರ ಎನ್ನುವ ಕಾರಣಕ್ಕೆ ಅವರಿಗೆ ಈ ದುರಾದೃಷ್ಟವೇ? ಒಂದೇ ಒಂದು ಅವಕಾಶ ಕೊಡದಷ್ಟು ಕಳಪೆ ಬೌಲಿಂಗ್ ಮಾಡುತ್ತಾರಾ ಅರ್ಜುನ್? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಜೊತೆಗೆ ಕನಿಷ್ಠ ಮುಂದಿನ ಪಂದ್ಯದಲ್ಲಾದರೂ ಅವರಿಗೆ ಒಂದು ಅವಕಾಶ ಕೊಡಿ ಎಂದು ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ಹಾರ್ದಿಕ್ ಪಾಂಡ್ಯ ಹೊರಹೋಗಿದ್ದಕ್ಕೆ ಮುಂಬೈ ಅದೃಷ್ಟ ಹೋಯ್ತಾ?!