Publish Date: Mon, 10 Apr 2023 (07:20 IST)
Updated Date: Mon, 10 Apr 2023 (07:42 IST)
ಅಹಮ್ಮದಾಬಾದ್: ಐಪಿಎಲ್ ಎಂದರೆ ಸಿಕ್ಸರ್, ಬೌಂಡರಿಗಳ ಸುರಿಮಳೆ ಗ್ಯಾರಂಟಿ ಎನ್ನುವುದು ಕ್ರಿಕೆಟ್ ಪ್ರಿಯರಿಗೆ ಗೊತ್ತು. ಆದರೆ ನಿನ್ನೆ ಗುಜರಾತ್ ಟೈಟನ್ಸ್ ವಿರುದ್ಧ ಕೆಕೆಆರ್ ಆಟಗಾರ ರಿಂಕು ಸಿಂಗ್ ಸಿಡಿಸಿದ ಸಿಕ್ಸರ್ ಗಳ ಸರಮಾಲೆಗೆ ಇಡೀ ಕ್ರಿಕೆಟ್ ಲೋಕವೇ ಕ್ಲೀನ್ ಬೌಲ್ಡ್ ಆಗಿದೆ.
ಗುಜರಾತ್ ನೀಡಿದ್ದ 205 ರನ್ ಗಳ ಗುರಿ ಬೆನ್ನತ್ತಿದ್ದ ಕೆಕೆಆರ್ ಸೋಲಿನಂಚಿನಲ್ಲಿತ್ತು. 19 ಓವರ್ ಆದಾಗ ಕೆಕೆಆರ್ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತಷ್ಟೇ. ಹೀಗಾಗಿ ಸೋಲು ಗ್ಯಾರಂಟಿ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ 16 ಎಸೆತಗಳಿಂದ 18 ರನ್ ಗಳಿಸಿ ಕ್ರೀಸ್ ನಲ್ಲಿದ್ದ ರಿಂಕು ಸಿಂಗ್ ಪಂದ್ಯದ ಗತಿಯನ್ನೇ ಬದಲಾಯಿಸಿದರು.
ಅಂತಿಮ ಓವರ್ ನಲ್ಲಿ 29 ರನ್ ಬೇಕಾಗಿದ್ದಾಗ ಕೊನೆಯ ಐದು ಎಸೆತಗಳನ್ನು ಸತತವಾಗಿ ಸಿಕ್ಸರ್ ಗಟ್ಟುವ ಮೂಲಕ ಕೆಕೆಆರ್ ಗೆ ಅಸಾಧ‍್ಯವಾಗಿದ್ದ ಗೆಲುವು ಕೊಡಿಸಿದರು. ಕೊನೆಗೆ ರಿಂಕು 21 ಎಸೆತಗಳಿಂದ 48 ರನ್ ಗಳಿಸಿದ್ದರು! ರಿಂಕು ಸಿಂಗ್ ಸಿಕ್ಸರ್ ಕಮಾಲ್ ಗೆ ಇಡೀ ಕ್ರಿಕೆಟ್ ಲೋಕವೇ ಶಹಬ್ಬಾಶ್ ನೀಡಿದೆ.