Publish Date: Sun, 09 Apr 2023 (08:30 IST)
Updated Date: Sun, 09 Apr 2023 (08:57 IST)
ಅಹಮ್ಮದಾಬಾದ್: ಐಪಿಎಲ್ 2023 ರಲ್ಲಿ ಸೋಲಿಲ್ಲದೇ ಮೆರೆದಾಡುತ್ತಿರುವ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ಗೆ ಇಂದು ಕೋಲ್ಕೊತ್ತಾ ನೈಟ್ ರೈಡರ್ಸ್ ಎದುರಾಳಿಯಾಗಿದೆ.
ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಇದುವರೆಗೆ ನಡೆದ ಎಲ್ಲಾ ಪಂದ್ಯಗಳಲ್ಲಿ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಮಿಂಚಿದೆ. ಅನುಭವಿ-ಯುವ ಆಟಗಾರರ ಮಿಶ್ರಣವಾಗಿರುವ ಗುಜರಾತ್ ಈ ಕೂಟದ ಪ್ರಬಲ ಸ್ಪರ್ಧಿ.
ಇತ್ತ ಕೆಕೆಆರ್ ಮೊದಲ ಪಂದ್ಯದಲ್ಲಿ ಸೋತರೂ ಎರಡನೇ ಪಂದ್ಯದಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದೆ. ಸ್ಪಿನ್ನರ್ ಗಳೇ ಕೆಕೆಆರ್ ಶಕ್ತಿ. ಹೀಗಾಗಿ ಗುಜರಾತ್ ಹ್ಯಾಟ್ರಿಕ್ ಗೆಲುವಿಗೆ ತಡೆ ಒಡ್ಡುವ ಸಾಮರ್ಥ್ಯ ಕೆಕೆಆರ್ ಗಿದೆ. ಈ ಪಂದ್ಯ ಅಪರಾಹ್ನ 3.30 ಕ್ಕೆ ನಡೆಯಲಿದೆ.