ಮುಂಬೈ: 2011 ರ ವಿಶ್ವಕಪ್ ಗೆಲುವು ಎಲ್ಲರ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಫೈನಲ್ ಪಂದ್ಯದಲ್ಲಿ ಧೋನಿ ಸಿಡಿಸಿದ ಸಿಕ್ಸರ್ ಈಗಲೂ ಎಲ್ಲರ ನೆನಪಲ್ಲಿದೆ.
ಅಂದು ವಾಂಖೆಡೆ ಮೈದಾನದಲ್ಲಿ ಫೈನಲ್ ಪಂದ್ಯ ನಡೆದಿತ್ತು. ಧೋನಿ ಅಂದು ಸಿಕ್ಸರ್ ಸಿಡಿಸಿದಾಗ ಬಾಲ್ ಹೋಗಿ ಬಿದ್ದಿದ್ದ ಅದೇ ಸೀಟ್ ಗೆ ಧೋನಿ ಹೆಸರಿಡಲಾಗಿದೆ.
ವಿಶ್ವಕಪ್ ಗೆಲುವಿನ ನೆನಪಿಗಾಗಿ ಆಸನಕ್ಕೆ ಧೋನಿ ಹೆಸರಿಡಲಾಗಿದೆ. ಇದೀಗ ಧೋನಿ ಐಪಿಎಲ್ ಪಂದ್ಯವಾಡಲು ವಾಂಖೆಡೆ ಮೈದಾನಕ್ಕೆ ಬಂದಿದ್ದು, ಆ ವಿಶೇಷ ಆಸನವನ್ನು ಧೋನಿ ಕೈಯಿಂದಲೇ ಉದ್ಘಾಟನೆ ಮಾಡಿಸಲಾಗಿದೆ.