Select Your Language

Notifications

webdunia
webdunia
webdunia
webdunia

ಐಪಿಎಲ್ 2023: ಗೆಲುವಿನೊಂದಿಗೆ ಅಗ್ರಸ್ಥಾನಕ್ಕೇರಿದ ಲಕ್ನೋ

ಐಪಿಎಲ್ 2023: ಗೆಲುವಿನೊಂದಿಗೆ ಅಗ್ರಸ್ಥಾನಕ್ಕೇರಿದ ಲಕ್ನೋ
ಲಕ್ನೋ , ಶನಿವಾರ, 8 ಏಪ್ರಿಲ್ 2023 (07:20 IST)
Photo Courtesy: Twitter
ಲಕ್ನೋ: ಐಪಿಎಲ್ 2023 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 5 ವಿಕೆಟ್ ಗಳ ಗೆಲುವು ಸಾಧಿಸಿದ ಲಕ್ನೋ ಸೂಪರ್ ಜೈಂಟ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಲಷ್ಟೇ ಶಕ್ತವಾಯಿತು. ಅನ್ಮೋಲ್ ಸಿಂಗ್ 31, ರಾಹುಲ್ ತ್ರಿಪಾಟಿ 35, ಅಬ್ದುಲ್ ಸಮದ್ 21 ರನ್ ಗಳಿಸಿದರು.

ಈ ಮೊತ್ತ ಬೆನ್ನತ್ತಿದ ಲಕ್ನೋ 16 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 127 ರನ್ ಗಳಿಸುವ ಮೂಲಕ ಗೆಲುವು ಕಂಡಿತು. ನಾಯಕ ಕೆಎಲ್ ರಾಹುಲ್ 35, ಕೃನಾಲ್ ಪಾಂಡ್ಯ 34 ರನ್ ಗಳಿಸಿದರು.  ಇದರೊಂದಿಗೆ ಲಕ್ನೋ ತಾನಾಡಿದ 3 ಪಂದ್ಯಗಳ ಪೈಕಿ 2 ಗೆಲುವು ಕಂಡು ಅಗ್ರಸ್ಥಾನಕ್ಕೇರಿತು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ಗೆಲುವಿನ ಹುಡುಕಾಟದಲ್ಲಿರುವ ಹೈದರಾಬಾದ್ ಗೆ ಲಕ್ನೋ ಎದುರಾಳಿ