Publish Date: Thu, 06 Apr 2023 (09:30 IST)
Updated Date: Thu, 06 Apr 2023 (09:31 IST)
ಗುವಾಹಟಿ: ಐಪಿಎಲ್ 2023 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಕೇವಲ 5 ರನ್ ಗಳಿಂದ ಸೋತ ಬಳಿಕ ನೆಟ್ಟಿಗರು ಕನ್ನಡಿಗ ಬ್ಯಾಟಿಗ ದೇವದತ್ತ್ ಪಡಿಕ್ಕಲ್ ರನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ.
ಮೊದಲು ಆರ್ ಸಿಬಿ ಪರ ಆಡುತ್ತಿದ್ದ ದೇವದತ್ತ್ ಪಡಿಕ್ಕಲ್ ಈಗ ರಾಜಸ್ಥಾನ್ ಪರ ಐಪಿಎಲ್ ಆಡುತ್ತಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಪಡಿಕ್ಕಲ್ 21 ರನ್ ಗಳಿಸಲು ಪರದಾಡಿ 26 ಎಸೆತ ಎದುರಿಸಿದ್ದರು. ಅವರ ಸ್ಲೋ ಇನಿಂಗ್ಸ್ ರಾಜಸ್ಥಾನ್ ಗೆ ಮುಳುವಾಗಿತ್ತು.
ಇದಕ್ಕಾಗಿ ದೇವದತ್ತ್ ಪಡಿಕ್ಕಲ್ ರನ್ನು ನೆಟ್ಟಿಗರು ದೂಷಿಸಿದ್ದಾರೆ. ರಾಜಸ್ಥಾನ್ ಸೋಲಿಗೆ ಅವರೇ ಕಾರಣ ಎಂದಿದ್ದಾರೆ. ಮಧ‍್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿದ ಪಡಿಕ್ಕಲ್ ರನ್ನು ಔಟ್ ಮಾಡಿದ ಬಳಿಕ ಉಮ್ರಾನ್ ಮಲಿಕ್ ಕೂಡಾ ಸಂಭ್ರಮಿಸಲಿಲ್ಲ. ಪಡಿಕ್ಕಲ್ ಪಂಜಾಬ್ ನ 12 ನೇ ಆಟಗಾರ ಎಂದು ಲೇವಡಿ ಮಾಡಿದ್ದಾರೆ.