Publish Date: Wed, 05 Apr 2023 (09:30 IST)
Updated Date: Wed, 05 Apr 2023 (09:30 IST)
ನವದೆಹಲಿ: ರಸ್ತೆ ಅಪಘಾತದಿಂದಾಗಿ ಕ್ರಿಕೆಟ್ ನಿಂದ ದೂರವಿರುವ ರಿಷಬ್ ಪಂತ್ ಇದೀಗ ಐಪಿಎಲ್ 2023 ರ ಡೆಲ್ಲಿ ಕ್ಯಾಪಿಟಲ್ಸ್-ಗುಜರಾತ್ ನಡುವಿನ ಪಂದ್ಯಕ್ಕೆ ಆಗಮಿಸಿದ್ದಾರೆ.
ಕುಂಟುತ್ತಲೇ ಊರುಗೋಲಿನ ಸಹಾಯದಿಂದ ಬಂದ ರಿಷಬ್ ಗ್ಯಾಲರಿಯಲ್ಲಿ ಕುಳಿತು ತಮ್ಮ ತಂಡಕ್ಕೆ ಚಿಯರ್ ಅಪ್ ಮಾಡಿದ್ದಾರೆ. ಸಹಾಯಕರ ಕೈ ಹಿಡಿದು ಮೈದಾನಕ್ಕೆ ಬಂದ ರಿಷಬ್ ಗ್ಯಾಲರಿಯಲ್ಲಿ ಕಾಲು ಮೇಲೆತ್ತಿ ಕುಳಿತು ಪಂದ್ಯ ವೀಕ್ಷಿಸಿದ್ದಾರೆ.
ಇನ್ನು ರಿಷಬ್ ಮೈದಾನಕ್ಕೆ ಬರುತ್ತಿದ್ದಂತೇ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿದೆ. ರಸ್ತೆ ಅಪಘಾತವಾದ ಬಳಿಕ ರಿಷಬ್ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.