Select Your Language

Notifications

webdunia
webdunia
webdunia
webdunia

ಐಪಿಎಲ್ 2023: ಕೊನೆಯ ಓವರ್ ಡ್ರಾಮಾದಲ್ಲಿ ಗೆದ್ದ ಲಕ್ನೋ

ಐಪಿಎಲ್ 2023: ಕೊನೆಯ ಓವರ್ ಡ್ರಾಮಾದಲ್ಲಿ ಗೆದ್ದ ಲಕ್ನೋ
ಬೆಂಗಳೂರು , ಮಂಗಳವಾರ, 11 ಏಪ್ರಿಲ್ 2023 (08:20 IST)
Photo Courtesy: Twitter
ಬೆಂಗಳೂರು: ಐಪಿಎಲ್ 2023 ರಲ್ಲಿ ಲಕ್ನೋ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್ ಡ್ರಾಮಾ ಬಳಿಕ ಆರ್ ಸಿಬಿ ಕೊನೆಯ ಎಸೆತದಲ್ಲಿ ಸೋಲು ಅನುಭವಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 212 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಈ ಮೊತ್ತವನ್ನು ಲಕ್ನೋ ಬೆನ್ನಟ್ಟುವುದು ಅಸಾಧ‍್ಯವೆಂದೇ ಎಲ್ಲರೂ ಅಂದುಕೊಂಡಿದ್ದರು.

ಅದಕ್ಕೆ ಸರಿಯೆನಿಸುವಂತೆ ಲಕ್ನೋ ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ನಿಕಲಸ್ ಪೂರನ್ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದರು. ಕೇವಲ 19 ಎಸೆತಗಳನ್ನು ಎದುರಿಸಿ 7 ಸಿಕ್ಸರ್ ಸಹಿತ 69 ರನ್ ಚಚ್ಚಿದರು. ಇದರಿಂದ ಪಂದ್ಯ ಲಕ್ನೋ ಪರ ವಾಲಿತು.

ಹಾಗಿದ್ದರೂ ಅಂತಿಮ ಓವರ್ ನಲ್ಲಿ 4 ರನ್ ಬೇಕಾಗಿದ್ದಾಗ ಹರ್ಷಲ್ ಪಟೇಲ್ ಬೌಲಿಂಗ್ ಗಿಳಿದು 2 ವಿಕೆಟ್ ಕಬಳಿಸಿದರು. ಹರ್ಷಲ್ ಪಟೇಲ್ ಕೊನೆಯ ವಿಕೆಟ್ ಪಡೆಯಲು ಮಂಡಕ್ ಔಟ್ ಮಾಡಲು ಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಆದರೆ ಕೊನೆಯ ಎಸೆತವನ್ನು ಆವೇಶ್ ಖಾನ್ 1 ರನ್ ಕಸಿಯುವಲ್ಲಿ ಯಶಸ್ವಿಯಾಗಿ ಲಕ್ನೋಗೆ ರೋಚಕ 1 ವಿಕೆಟ್‍ ಗಳ ಗೆಲುವು ಕೊಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ತವರಿನಲ್ಲಿ ಆರ್ ಸಿಬಿ ಹುಲಿ