Select Your Language

Notifications

webdunia
webdunia
webdunia
webdunia

ಐಪಿಎಲ್ 2023: ಗೆಲುವು ಅರಸಿ ಹೊರಟ ಮುಂಬೈಗೆ ಡೆಲ್ಲಿ ಸವಾಲು

ಐಪಿಎಲ್ 2023: ಗೆಲುವು ಅರಸಿ ಹೊರಟ ಮುಂಬೈಗೆ ಡೆಲ್ಲಿ ಸವಾಲು
ನವದೆಹಲಿ , ಮಂಗಳವಾರ, 11 ಏಪ್ರಿಲ್ 2023 (09:00 IST)
Photo Courtesy: Twitter
ನವದೆಹಲಿ: ಐಪಿಎಲ್ 2023 ರಲ್ಲಿ ಮೊದಲ ಗೆಲುವು ಅರಸಿ ಹೊರಟಿರುವ ಮುಂಬೈ ಇಂಡಿಯನ್ಸ್ ಗೆ ಇಂದು ಡೆಲ್ಲಿ ಕ್ಯಾಪಿಟಲ್ಸ್ ಸವಾಲಾಗಿದೆ.

ರೋಹಿತ್ ಶರ್ಮಾ ನೇತೃತ್ವದ ಮುಂಬೈ ಈ ಬಾರಿಯೂ ನಿರಾಶಾದಾಯಕ ಪ್ರದರ್ಶನ ಮುಂದುವರಿಸಿದೆ. ಮಧ‍್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಖ್ಯಾತಿಗೆ ತಕ್ಕ ಆಟವಾಡದೇ ಇರುವುದು ಮುಂಬೈಗೆ ದೊಡ್ಡ ಹೊಡೆತ ನೀಡಿದೆ. ಆಡಿದ ಎರಡೂ ಪಂದ್ಯಗಳನ್ನು ಸೋತಿರುವ ಮುಂಬೈ ಇಂದಾದರೂ ಗೆಲುವು ಕಾಣುವ ವಿಶ್ವಾಸದಲ್ಲಿದೆ.

ಅತ್ತ ಡೆಲ್ಲಿ ಕ್ಯಾಪಿಟಲ್ಸ್ ನದ್ದು ಮತ್ತೊಂದು ವ್ಯಥೆಯ ಕತೆ. ಆಡಿದ ಮೂರೂ ಪಂದ್ಯಗಳಲ್ಲಿ ಸೋತಿರುವ ಡೆಲ್ಲಿಗೆ ಈಗ ಗೆಲುವು ಅನಿವಾರ್ಯ. ರಿಷಬ್ ಪಂತ್ ಅನುಪಸ್ಥಿತಿ ಡೆಲ್ಲಿ ತಂಡಕ್ಕೆ ಕಾಡುತ್ತಿದೆ. ಬ್ಯಾಟಿಂಗ್ ಕ್ಲಿಕ್ ಆಗದೇ ಇರುವುದು ಡೆಲ್ಲಿಗೆ ತಲೆನೋವಾಗಿದೆ. ಈ ಸೋತವರ ನಡುವಿನ ಪಂದ್ಯ ಸಂಜೆ 7.30 ಕ್ಕೆ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ಠುಸ್ ಆಯ್ತು ಕೊಹ್ಲಿ ಸಲಹೆ