Publish Date: Fri, 25 Mar 2022 (09:10 IST)
Updated Date: Fri, 25 Mar 2022 (09:23 IST)
ಮುಂಬೈ: ಐಪಿಎಲ್ 2022 ರಲ್ಲಿ ಪಾಲ್ಗೊಳ್ಳಲು ವೀಸಾ ಸಮಸ್ಯೆಯಿಂದಾಗಿ ಭಾರತಕ್ಕೆ ಬರಲಾಗದೇ ಸಮಸ್ಯೆ ಅನುಭವಿಸಿದ್ದ ಮೊಯಿನ್ ಅಲಿ ಕೊನೆಗೂ ಇದೀಗ ಭಾರತಕ್ಕೆ ಬಂದಿಳಿದಿದ್ದಾರೆ.
ವೀಸಾ ಸಮಸ್ಯೆ ಇದೀಗ ಬಗೆಹರಿದಿದ್ದು, ನಿನ್ನೆಯೇ ಮೊಯಿನ್ ಅಲಿ ಮುಂಬೈಗೆ ಬಂದಿಳಿದಿದ್ದಾರೆ. ತಕ್ಷಣವೇ ಅವರು ಐಸೋಲೇಷನ್ ಗೊಳಗಾಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲ ಪಂದ್ಯವನ್ನು ಮಾರ್ಚ್ 26 ರಂದು ಮುಂಬೈ ವಿರುದ್ಧ ಆಡಲಿದೆ. ಆದರೆ ಈ ಪಂದ್ಯಕ್ಕಾಗುವಾಗ ಕಡ್ಡಾಯ ಕ್ವಾರಂಟೈನ್ ಮುಗಿಸಿ ಮೊಯಿನ್ ಪಂದ್ಯಕ್ಕೆ ಲಭ್ಯರಾಗುವುದು ಅನುಮಾನ.