Publish Date: Thu, 24 Mar 2022 (09:00 IST)
Updated Date: Thu, 24 Mar 2022 (09:06 IST)
ಮುಂಬೈ: ಐಪಿಎಲ್ 2022 ಕ್ಕೆ ಮುನ್ನ ಕಳೆದ ಆವೃತ್ತಿಯಲ್ಲಿ ಗರಿಷ್ಠ ವಿಕೆಟ್ ಸಂಪಾದಿಸಿ ಪರ್ಪಲ್ ಕ್ಯಾಪ್ ಗೌರವಕ್ಕೆ ಪಾತ್ರರಾದವರು ಯಾರು ಎಂದು ನೋಡೋಣ.
ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹುಡುಗ ಹರ್ಷಲ್ ಪಟೇಲ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನ ಆವೇಶ್ ಖಾನ್ ನಡುವೆ ವಿಕೆಟ್ ಪೈಪೋಟಿಯಿತ್ತು. ಈ ಪೈಕಿ ಹರ್ಷಲ್ ಟೂರ್ನಿಯಲ್ಲಿ ಗರಿಷ್ಠ 32 ವಿಕೆಟ್ ಸಂಪಾದಿಸಿ ಪರ್ಪಲ್ ಕ್ಯಾಪ್ ಗೌರವ ಪಡೆದಿದ್ದರು.
ಆವೇಶ್ ಖಾನ್ 24 ವಿಕೆಟ್ ಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದರು. ಮುಂಬೈ ಕಳೆದ ಬಾರಿ ನೀರಸ ಪ್ರದರ್ಶನ ನೀಡಿದ್ದರೂ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ 21 ವಿಕೆಟ್ ಸಂಪಾದಿಸಿದ್ದರೆ, ಅವರಷ್ಟೇ ವಿಕೆಟ್ ಸಂಪಾದಿಸಿದ್ದ ಸಿಎಸ್ ಕೆ ಶ್ರಾದ್ಧೂಲ್ ಠಾಕೂರ್ ಮೂರನೇ ಸ್ಥಾನವನ್ನು ಹಂಚಿಕೊಂಡಿದ್ದರು. ಈ ಆವತ್ತಿಯಲ್ಲಿ ಗರಿಷ್ಠ ವಿಕೆಟ್ ಸಾಧನೆ ಯಾರ ಪಾಲಾಗುತ್ತದೆ ಕಾದುನೋಡಬೇಕು.