Publish Date: Thu, 24 Mar 2022 (09:10 IST)
Updated Date: Thu, 24 Mar 2022 (09:11 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವದಿಂದ ಕೊಹ್ಲಿ ಕೆಳಗಿಳಿದು ಆ ಸ್ಥಾನಕ್ಕೆ ಫಾ ಡು ಪ್ಲೆಸಿಸ್ ನೇಮಕವಾಗಿರಬಹುದು. ಆದರೆ ಇದು ತಾತ್ಕಾಲಿಕ ಮಾತ್ರ ಎಂದು ಟೀಂ ಇಂಡಿಯಾ ಕ್ರಿಕೆಟಿಗ, ರಾಜಸ್ಥಾನ್ ರಾಯಲ್ಸ್ ಆಟಗಾರ ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
ಕೊಹ್ಲಿಗೆ ಈ ವರ್ಷ ಮಾತ್ರ ಬ್ರೇಕ್ ನೀಡಿರಬಹುದು. ಮುಂದಿನ ವರ್ಷಕ್ಕೆ ಅವರು ಮತ್ತೆ ಆರ್ ಸಿಬಿಗೆ ವಾಪಸ್ ಆಗಬಹುದು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
ನಾಯಕನಾಗಿ ಕೊಹ್ಲಿ ಕಳೆದೆರಡು ವರ್ಷ ಸಾಕಷ್ಟು ಒತ್ತಡದಲ್ಲಿದ್ದರು. ಹಾಗಾಗಿ ಅವರು ನಾಯಕತ್ವದಿಂದ ಕೆಳಗಿಳಿದರು. ಈಗ ಒಂದು ವರ್ಷದ ಬ್ರೇಕ್ ಮುಗಿಸಿಕೊಂಡು ಅವರು ಮತ್ತೆ ಆರ್ ಸಿಬಿಗೆ ನಾಯಕರಾಗಿ ಮರಳಬಹುದು ಎಂದು ಅಶ್ವಿನ್ ಸಂದರ್ಶನವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.