Publish Date: Tue, 15 Mar 2022 (10:50 IST)
Updated Date: Tue, 15 Mar 2022 (10:59 IST)
ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಹಗಲು-ರಾತ್ರಿ ಟೆಸ್ಟ್ ಪಂದ್ಯದ ವೇಳೆ ತಮ್ಮನ್ನು ಪ್ರೋತ್ಸಾಹಿಸುತ್ತಿದ್ದ ಬೆಂಗಳೂರು ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ವಿಶೇಷವಾಗಿ ಧನ್ಯವಾದ ಸಲ್ಲಿಸಿದ್ದಾರೆ.
ನಿನ್ನೆ ಲಂಕಾ ತಂಡವನ್ನು ಸೋಲಿಸಿದ ಬಳಿಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದ ಮೂಲಕ ಇಲ್ಲಿನ ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದ ಎಂದಿದ್ದಾರೆ.
ಮೊದಲ ದಿನದಿಂದಲೂ ಕೊಹ್ಲಿ ಮೈದಾನಕ್ಕಿಳಿದರೆ ಮೈದಾನದಲ್ಲಿ ಪ್ರೇಕ್ಷಕರು ಜೈಕಾರ ಹಾಕುತ್ತಿದ್ದರು. ಇವರಿಗೆ ಕೊಹ್ಲಿ ಕೂಡಾ ಪ್ರತಿಕ್ರಿಯೆ ನೋಡುತ್ತಿದ್ದರು. ಇದು ವೀಕ್ಷಕರಿಗೆ ಮನರಂಜನೆ ಒದಗಿಸಿತ್ತು. ಆರ್ ಸಿಬಿ ಪರ ಆಡುವ ಕಾರಣಕ್ಕೆ ಕೊಹ್ಲಿಗೆ ಇಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ.