Publish Date: Mon, 14 Mar 2022 (17:47 IST)
Updated Date: Mon, 14 Mar 2022 (17:48 IST)
ಬೆಂಗಳೂರು: ಭಾರತ ಮತ್ತು ಶ್ರೀಲಂಕಾ ನಡುವಿನ ಹಗಲು ರಾತ್ರಿ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ 238 ರನ್ ಗಳ ಬೃಹತ್ ಅಂತರದಿಂದ ಗೆದ್ದು ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
447 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ್ದ ಲಂಕಾ ದ್ವಿತೀಯ ಇನಿಂಗ್ಸ್ ನಲ್ಲಿ 208 ರನ್ ಗಳಿಗೆ ಆಲೌಟ್ ಆಯಿತು. ಭಾರತದ ದಾಳಿಗೆ ಎದೆಯೊಡ್ಡಿ ನಿಂತ ದಿಮುತ ಕರುಣರತ್ನೆ ಭರ್ಜರಿ ಶತಕ ಸಿಡಿಸಿ 107 ರನ್ ಗಳಿಸಿದರು. ಆದರೆ ಅವರಿಗೆ ತಕ್ಕ ಸಾಥ್ ಸಿಗದೇ ಹೋಯಿತು.
ಶ್ರೀಲಂಕಾದ ಮೂವರು ಬ್ಯಾಟಿಗರನ್ನು ಬಿಟ್ಟರೆ ಉಳಿದವರು ಯಾರೂ ಎರಡಂಕಿ ರನ್ ಕೂಡಾ ಗಳಿಸಲಿಲ್ಲ. ಭಾರತದ ಪರ ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ತಲಾ 3 ವಿಕೆಟ್, ಅಕ್ಸರ್ ಪಟೇಲ್ 2, ರವೀಂದ್ರ ಜಡೇಜಾ 1 ವಿಕೆಟ್ ಕಬಳಿಸಿದರು. ನಾಯಕತ್ವ ವಹಿಸಿಕೊಂಡ ಬಳಿಕ ರೋಹಿತ್ ಇದುವರೆಗೆ ಸೋಲೇ ಅರಿಯದೇ ಟಿ20, ಏಕದಿನ, ಟೆಸ್ಟ್ ಪಂದ್ಯಗಳಲ್ಲಿ ಅಜೇಯರಾಗಿ ಮುನ್ನಗ್ಗುತ್ತಿರುವುದು ವಿಶೇಷ.