Publish Date: Mon, 14 Mar 2022 (17:02 IST)
Updated Date: Mon, 14 Mar 2022 (17:04 IST)
ಬೆಂಗಳೂರು: ಭಾರತ ಮತ್ತು ಶ್ರೀಲಂಕಾ ನಡುವಿನ ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ 447 ರನ್ ಗಳ ಗೆಲುವಿನ ಗುರಿ ಬೆನ್ನತ್ತಿರುವ ಲಂಕಾ ಇತ್ತೀಚೆಗಿನ ವರದಿ ಬಂದಾಗ 6 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿದೆ.
ಟೀಂ ಇಂಡಿಯಾ ಬೌಲರ್ ಗಳನ್ನು ಕಾಡುತ್ತಿರುವ ಧಿಮುತ ಕರುಣರತ್ನೆ 89 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರ ಜೊತೆಗೆ ನಿನ್ನೆ ಅಜೇಯರಾಗುಳಿದಿದ್ದ ಕುಸಾಲ್ ಮೆಂಡಿಸ್ 54 ರನ್ ಗಳಿಸಿ ಔಟಾದರು. ಈ ನಡುವೆ ವಿಕೆಟ್ ಕೀಪರ್ ನಿರೋಶನ್ ಡಿಕ್ ವೆಲ್ಲಾ ಜಿಗುಟಿನ ಆಟಕ್ಕೆ ಕೈ ಹಾಕಿದರಾದರೂ ಅಕ್ಸರ್ ಪಟೇಲ್ ಬೌಲಿಂಗ್ ನಲ್ಲಿ ಔಟಾದರು.
ಶ್ರೀಲಂಕಾಗೆ ಗೆಲ್ಲಲು ಇನ್ನೂ 267 ರನ್ ಗಳ ಅಗತ್ಯವಿದೆ. ಭಾರತದ ಪರ ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್ ತಲಾ 2, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ತಲಾ 1 ವಿಕೆಟ್ ಕಬಳಿಸಿದ್ದಾರೆ.