ಬೆಂಗಳೂರು: ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯವೂ ಮೂರೇ ದಿನಕ್ಕೆ ಮುಕ್ತಾಯಗೊಳ್ಳುವ ಎಲ್ಲಾ ಸೂಚನೆಯಿದೆ.
ಮೊದಲ ದಿನದಾಟದಲ್ಲಿ ಎರಡೂ ತಂಡಗಳ ವಿಕೆಟ್ ಗಳು ತರಗೆಲೆಯಂತೆ ಉರುಳಿವೆ. ಇಂತಹ ಪಿಚ್ ನಲ್ಲಿ ಟೆಸ್ಟ್ ಪಂದ್ಯ ಐದೂ ದಿನ ನಡೆದರೆ ಅದು ದೊಡ್ಡ ಪವಾಡ.
ನಿನ್ನೆಯ ದಿನದಂತ್ಯಕ್ಕೆ ಲಂಕಾ ಮೊದಲ ಇನಿಂಗ್ಸ್ ನಲ್ಲಿ 6 ವಿಕೆಟ್ ಕಳೆದುಕೊಂಡು 86 ರನ್ ಗಳಿಸಿತ್ತು. ಭಾರತದ ಮೊದಲ ಇನಿಂಗ್ಸ್ 252 ರನ್ ಗಳಿಗೆ ಸಮಾಪ್ತಿಯಾಗಿತ್ತು. ಅಂದರೆ ಒಂದೇ ದಿನ 16 ವಿಕೆಟ್ ಪತನವಾಗಿದೆ.
ಹೀಗಾಗಿ ಇಂದು ಲಂಕಾ ಬೇಗನೇ ಔಟಾದರೆ ಭಾರತ ಇಡೀ ದಿನ ದ್ವಿತೀಯ ಇನಿಂಗ್ಸ್ ಆಡಿದರೆ ನಾಳೆಯೇ ಶ್ರೀಲಂಕಾಕ್ಕೆ ದ್ವಿತೀಯ ಸರದಿ ಆಡಲು ಅವಕಾಶ ಸಿಗಲಿದೆ. ಹೀಗಾದಲ್ಲಿ ನಾಳೆಯೇ ಪಂದ್ಯ ಮುಗಿದರೂ ಅಚ್ಚರಿಯಿಲ್ಲ.