ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧ ಮಹಿಳಾ ಏಕದಿನ ವಿಶ್ವಕಪ್ ನಲ್ಲಿ ಶತಕ ಗಳಿಸಿದ ಭಾರತ ಮಹಿಳಾ ತಂಡದ ಬ್ಯಾಟರ್ ಗಳಾದ ಸ್ಮೃತಿ ಮಂಥನಾ ಮತ್ತು ಹರ್ಮನ್ ಪ್ರೀತ್ ಕೌರ್ ಜೋಡಿಯನ್ನು ಧೋನಿ-ಕೊಹ್ಲಿ ಜೋಡಿಗೆ ಹೋಲಿಸಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಇಂಟರೆಸ್ಟಿಂಗ್ ವಿಚಾರವೊಂದನ್ನು ಹೇಳಿದ್ದಾರೆ.
ಧೋನಿ ಆಡುತ್ತಿದ್ದ ಸಂದರ್ಭದಲ್ಲಿ ಧರಿಸುತ್ತಿದ್ದ ಜೆರ್ಸಿ ಸಂಖ್ಯೆ 7. ಕೊಹ್ಲಿ ಜೆರ್ಸಿ ಸಂಖ್ಯೆ 18. ಇದೀಗ ಮಹಿಳಾ ಬ್ಯಾಟರ್ ಗಳಾದ ಹರ್ಮನ್ ಜೆರ್ಸಿ ಸಂಖ್ಯೆ 7, ಸ್ಮೃತಿ ಜೆರ್ಸಿ ಸಂಖ್ಯೆ 18.
ಈ ಮೂಲಕ ಹರ್ಮನ್-ಸ್ಮೃತಿ ಜೋಡಿಯನ್ನು ಸೆಹ್ವಾಗ್ ಧೋನಿ-ಕೊಹ್ಲಿ ಜೋಡಿಗೆ ಹೋಲಿಸಿದ್ದಾರೆ. ಪುರುಷರ ಕ್ರಿಕೆಟ್ ನಲ್ಲಿ ಈ 7 ಮತ್ತು 18 ನಂಬರ್ ಜೆರ್ಸಿ ಬೌಲರ್ ಗಳಿಗೆ ಸಾಕಷ್ಟು ಬೆವರಿಳಿಸಿದೆ. ಈ ಮಹಿಳೆಯರೂ ಇವರಿಗೆ ಕಮ್ಮಿಯಲ್ಲ ಎಂದು ಸೆಹ್ವಾಗ್ ತಮಾಷೆ ಮಾಡಿದ್ದಾರೆ.