Select Your Language

Notifications

webdunia
webdunia
webdunia
webdunia

ಮಹಿಳಾ ಏಕದಿನ ವಿಶ್ವಕಪ್: ಸ್ಮೃತಿ, ಹರ್ಮನ್ ಭರ್ಜರಿ ಶತಕ

ಮಹಿಳಾ ಏಕದಿನ ವಿಶ್ವಕಪ್: ಸ್ಮೃತಿ, ಹರ್ಮನ್ ಭರ್ಜರಿ ಶತಕ
ಹ್ಯಾಮಿಲ್ಟನ್ , ಶನಿವಾರ, 12 ಮಾರ್ಚ್ 2022 (10:05 IST)
ಹ್ಯಾಮಿಲ್ಟನ್: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಸ್ಮೃತಿ ಮಂಥನಾ ಮತ್ತು ಹರ್ಮನ್ ಪ್ರೀತ್ ಕೌರ್ ಭರ್ಜರಿ ಶತಕದ ನೆರವಿನಿಂದ ಎದುರಾಳಿಗಳಿಗೆ 318 ರನ್ ಗಳ ಗೆಲುವಿನ ಗುರಿ ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತದ ವನಿತೆಯರು ಉತ್ತಮ ಆರಂಭ ನೀಡಿದರು. ಸ್ಮೃತಿ ಹೊಡೆಬಡಿಯ ಆಟವಾಡಿ 119 ಎಸೆತಗಳಿಂದ ಭರ್ಜರಿ 123 ರನ್ ಗಳಿಸಿ ಔಟಾದರೆ, ಇನ್ನೊಬ್ಬ ಆರಂಭಿಕ ಆಟಗಾರ್ತಿ 21 ಎಸೆತಗಳಲ್ಲಿ 31 ರನ್ ಗಳಿಸಿ ಔಟಾದರು.

ಮಧ್ಯಮ ಕ್ರಮಾಂಕದಲ್ಲಿ ಫಾರ್ಮ್ ಗೆ ಬಂದ ಹರ್ಮನ್ ಪ್ರೀತ್ ಕೌರ್ ಅಬ್ಬರದ 109 ರನ್ ಗಳಿಸಿ ಔಟಾದರು. ಅವರ ಇನಿಂಗ್ಸ್ ಕಳೆದ ವಿಶ್ವಕಪ್ ನಲ್ಲಿ ಸಿಡಿಸಿದ ಶತಕವನ್ನು ನೆನಪಿಸುವಂತಿತ್ತು. ಇದರೊಂದಿಗೆ ಭಾರತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 317 ರನ್ ಗಳ ಬೃಹತ್ ಮೊತ್ತ ಪೇರಿಸಿತು.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿಗೆ ಹೊಸ ನಾಯಕನ ಘೋಷಣೆ ಇಂದು