Select Your Language

Notifications

webdunia
webdunia
webdunia
Monday, 7 April 2025
webdunia

ರೋಹಿತ್ ಶರ್ಮಾ ಸಿಕ್ಸರ್ ಗೆ ಪ್ರೇಕ್ಷಕನ ಮೂಗು ಮುರಿಯಿತು!

ರೋಹಿತ್ ಶರ್ಮಾ
ಬೆಂಗಳೂರು , ಭಾನುವಾರ, 13 ಮಾರ್ಚ್ 2022 (09:57 IST)
ಬೆಂಗಳೂರು: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಹೊಡೆದ ಸಿಕ್ಸರ್ಗೆ ಪ್ರೇಕ್ಷಕರೊಬ್ಬರಿಗೆ ಮೂಗು ಮುರಿತಕ್ಕೊಳಗಾಗಿದೆ.

ರೋಹಿತ್ ಶರ್ಮಾ ಬ್ಯಾಟಿಂಗ್ ವೇಳೆ ಏಕೈಕ ಸಿಕ್ಸರ್ ಸಿಡಿಸಿದ್ದರು. ಈ ಸಿಕ್ಸರ್ ಪಂದ್ಯ ನೋಡುತ್ತಿದ್ದ ಪ್ರೇಕ್ಷಕರೊಬ್ಬರ ಮೂಗಿಗೆ ಕಂಟಕವಾಗಿದೆ. ಬಾಲ್ ಮೂಗಿಗೆ ಬಡಿದ ಪರಿಣಾಮ ಆತನ ಮೂಗಿನ ಮೂಳೆಗೆ ಪೆಟ್ಟಾಗಿದೆ. ತಕ್ಷಣವೇ ಕೆಎಸ್ ಸಿಎ ಅಧಿಕಾರಿಗಳು ಆತನಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಿಕೊಟ್ಟರು.

ಎಕ್ಸ್ ರೇಯಲ್ಲಿ ಆತನ ಮೂಗಿನ ಮೂಳೆ ಮುರಿದಿರುವುದು ತಿಳಿದುಬಂದಿದೆ. ಸಾಮಾನ್ಯವಾಗಿ ಆಟಗಾರರು ಹೊಡೆದ ಸಿಕ್ಸರ್ ಪ್ರೇಕ್ಷಕರ ಗ್ಯಾಲರಿಗೆ ಬರುವಾಗ ಪ್ರೇಕ್ಷಕರು ಅದನ್ನು ಕ್ಯಾಚ್ ಹಿಡಿಯುವ ಪ್ರಯತ್ನ ನಡೆಸುತ್ತಾರೆ. ಇಂತಹ ಪ್ರಯತ್ನದಲ್ಲಿ ಎಡವಟ್ಟುಗಳಾಗುವುದು ಸಹಜ.

Share this Story:

Follow Webdunia kannada

ಮುಂದಿನ ಸುದ್ದಿ

ಚಿನ್ನಸ್ವಾಮಿ ಮೈದಾನದಲ್ಲಿ ಫ್ಯಾನ್ಸ್ ಕ್ವಾಟ್ಲೆ, ವಿರಾಟ್ ಕೊಹ್ಲಿ ತಮಾಷೆ