Publish Date: Sun, 13 Mar 2022 (16:33 IST)
Updated Date: Sun, 13 Mar 2022 (16:35 IST)
ಬೆಂಗಳೂರು: ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೃಹತ್ ಮುನ್ನಡೆ ಕಂಡುಕೊಂಡಿದೆ.
ಮೊದಲ ಇನಿಂಗ್ಸ್ ನಲ್ಲಿ ಭಾರತ ಗಳಿಸಿದ್ದ 252 ರನ್ ಗಳಿಗೆ ಉತ್ತರವಾಗಿ ಲಂಕಾ 109 ರನ್ ಗಳಿಗೆ ಆಲೌಟ್ ಆಯಿತು. ಇದರಿಂದಾಗಿ ಟೀಂ ಇಂಡಿಯಾಗೆ 143 ರನ್ ಗಳ ಬೃಹತ್ ಮುನ್ನಡೆ ಲಭಿಸಿತು. ಜಸ್ಪ್ರೀತ್ ಬುಮ್ರಾಗೆ 5 ವಿಕೆಟ್ ಗಳ ಶ್ರೇಯಸ್ಸು ಸಿಕ್ಕಿತು.
ಇದೀಗ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ 1 ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿದೆ. ಮಯಾಂಕ್ ಅಗರ್ವಾಲ್ 22 ರನ್ ಗೆ ಔಟಾದರು.ಇದೀಗ ರೋಹಿತ್ ಶರ್ಮಾ 35, ಹನುಮ ವಿಹಾರಿ 13 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತದ ಒಟ್ಟಾರೆ ಮುನ್ನಡೆ 216 ರನ್ ಗಳಾಗಿವೆ.
Krishnaveni K
Publish Date: Sun, 13 Mar 2022 (16:33 IST)
Updated Date: Sun, 13 Mar 2022 (16:35 IST)