ಮುಂಬೈ: ಈ ಬಾರಿ ಭಾರತದಲ್ಲೇ ನಡೆಯಲಿರುವ ಐಪಿಎಲ್ ಕೂಟದ ಲೀಗ್ ಪಂದ್ಯಗಳಿಗೆ ಶೇ.25 ಪ್ರೇಕ್ಷಕರಿಗೆ ಮೈದಾನಕ್ಕೆ ಪ್ರವೇಶಿಸಲು ಬಿಸಿಸಿಐ ಅನುಮತಿ ನೀಡಿದೆ.
ಮಹಾರಾಷ್ಟ್ರದ ಮುಂಬೈ ಮತ್ತು ಪುಣೆಯಲ್ಲಿ ನಡೆಯಲಿರುವ ಲೀಗ್ ಹಂತದ ಪಂದ್ಯಗಳಿಗೆ ಶೇ.25 ಪ್ರೇಕ್ಷಕರಿಗೆ ಅನುಮತಿ ನೀಡಲು ಬಿಸಿಸಿಐ ನಿರ್ಧರಿಸಿದೆ.
ಕಳೆದ ಬಾರಿ ಕೂಟ ಖಾಲಿ ಮೈದಾನದಲ್ಲಿ ನಡೆದಿತ್ತು. ಆದರೆ ಈಗ ಕೊರೋನಾ ಪ್ರಕರಣಗಳು ಕಡಿಮೆಯಾಗಿರುವುದರಿಂದ ಸೀಮಿತ ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ. ನಾಕೌಟ್ ಹಂತದ ಪಂದ್ಯಗಳು ಅಹಮ್ಮದಾಬಾದ್ ನಲ್ಲಿ ನಡೆಯುತ್ತಿವೆ.