ಕೊಲಂಬೋ: ಏಷ್ಯಾ ಕಪ್ ಟ್ರೋಫಿ ಫೈನಲ್ ಡ್ರಾಮಾದ ಬಳಿಕ ಇದೀಗ ಮತ್ತೊಂದು ಭಾರತ,ಪಾಕಿಸ್ತಾನ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಈ ಬಾರಿ ಮಹಿಳೆಯರ ಸರದಿ.
ಮಹಿಳೆಯರ ಏಕದಿನ ವಿಶ್ವಕಪ್ ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಮೊದಲ ಪಂದ್ಯದಲ್ಲಿ ನಿನ್ನೆ ಶ್ರೀಲಂಕಾ ಮಹಿಳೆಯರ ವಿರುದ್ಧ ಆಡಿದ್ದ ಭಾರತೀಯ ವನಿತೆಯರು ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ 59 ರನ್ ಗಳಿಂದ ಗೆಲುವು ಸಾಧಿಸಿದ್ದರು. ಈ ಪಂದ್ಯ ಗುವಾಹಟಿಯಲ್ಲಿ ನಡೆದಿತ್ತು.
ಇದೀಗ ಎರಡನೇ ಪಂದ್ಯವನ್ನು ಭಾರತ ಸಾಂಪ್ರಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡಲಿದೆ. ಈ ಪಂದ್ಯ ಅಕ್ಟೋಬರ್ 5 ರಂದು ಅಂದರೆ ಭಾನುವಾರ ನಡೆಯಲಿದೆ. ಈ ಪಂದ್ಯ ಕೊಲೊಂಬೋದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುವುದು.
ಪುರುಷರ ತಂಡದ ನಡುವೆ ನಡೆದ ಹೈಡ್ರಾಮಾದ ಬಳಿಕ ಈಗ ಮಹಿಳೆಯರ ತಂಡಗಳು ಮುಖಾಮುಖಿಯಾಗುತ್ತಿವೆ. ಭಾರತ, ಪಾಕಿಸ್ತಾನ ನಡುವಿನ ಪಂದ್ಯ ಎಂದರೆ ಯಾವುದೇ ಫಾರ್ಮ್ಯಾಟ್ ಇರಲಿ ಉತ್ಸಾಹ ಹೆಚ್ಚೇ ಇರುತ್ತದೆ. ವಿಶೇಷವೆಂದರೆ ಇಲ್ಲೂ ಭಾರತೀಯ ವನಿತೆಯರೇ ಸ್ಟ್ರಾಂಗ್ ಆಗಿದ್ದು, ಗೆಲ್ಲುವ ನೆಚ್ಚಿನ ತಂಡವಾಗಿದೆ.