Daily Horoscope

Select Your Language

Notifications

webdunia
webdunia
webdunia
webdunia

ಮೈದಾನದಲ್ಲೂ ಆಪರೇಷನ್ ಸಿಂಧೂರ್ ಎಂದ ಪ್ರಧಾನಿ ಮೋದಿ: ಯೋಧರ ಸಾಹಸಕ್ಕೆ ಹೋಲಿಸಬೇಡಿ ಎಂದ ನೆಟ್ಟಿಗರು

PM Modi
ನವದೆಹಲಿ: ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಟೀಂ ಇಂಡಿಯಾಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿಗೆ ಯೋಧರ ಸಾಹಸವನ್ನು ಕ್ರಿಕೆಟ್ ಪಂದ್ಯಕ್ಕೆ ಹೋಲಿಸಬೇಡಿ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.

ಏಷ್ಯಾ ಕಪ್ ನಲ್ಲಿ ಭಾರತ ಗೆಲ್ಲುತ್ತಿದ್ದಂತೇ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ಮೈದಾನದಲ್ಲೂ ಆಪರೇಷನ್ ಸಿಂಧೂರ್. ಫಲಿತಾಂಶ ಒಂದೇ, ಭಾರತವೇ ಗೆದ್ದಿದೆ. ಟೀಂ ಇಂಡಿಯಾ ಕ್ರಿಕೆಟಿಗರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.

ಆದರೆ ಅವರ ಟ್ವೀಟ್ ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯೋಧರು ಪ್ರಾಣ ಪಣವಾಗಿಟ್ಟುಕೊಂಡು ಹೋರಾಡಿದ ಆಪರೇಷನ್ ಸಿಂಧೂರ್ ಗೆ ಕ್ರಿಕೆಟಿಗರು ಆಡುವ ಪಂದ್ಯವನ್ನು ಹೋಲಿಸಬೇಡಿ ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನು ಹಲವರು ಮೋದಿ ಟ್ವೀಟ್ ಗೆ ಅಬ್ಬಾ ಈ ಟ್ವೀಟ್ ಪ್ರಧಾನಿಯೇ ಮಾಡಿದ್ದಾ ಎಂದು ನಮಗೇ ಆಶ್ವರ್ಯವಾಗುತ್ತಿದೆ. ಎಂಥಾ ಡೈನಾಮಿಕ ಪ್ರತಿಕ್ರಿಯೆ ಎಂದು ಹೊಗಳಿದ್ದಾರೆ. ಮತ್ತೆ ಕೆಲವರು ಇದು ಆಪರೇಷನ್ ಸಿಂಧೂರ್ ಅಲ್ಲ ಆಪರೇಷನ್ ತಿಲಕ್ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Video: ಸೆಂಡ್ ಆಫ್ ವೀರ ಅಬ್ರಾರ್ ಅಹ್ಮದ್ ಗೆ ಹೀಗೆ ಶೇಪ್ ಔಟ್ ಮಾಡೋದಾ ಟೀಂ ಇಂಡಿಯಾ ಹುಡುಗರು