Select Your Language

Notifications

webdunia
webdunia
webdunia
webdunia

ಹೊಡೆದೇ ಹಾಕ್ತೀವಿ: ಏಷ್ಯಾ ಕಪ್ ಫೈನಲ್ ಗೆ ಮುನ್ನ ಭಾರತದ ಬಗ್ಗೆ ಪಾಕಿಸ್ತಾನಿಯರ ವೀರಾವೇಷದ ಮಾತುಗಳು

Pakistan Cricket

Krishnaveni K

ದುಬೈ , ಶನಿವಾರ, 27 ಸೆಪ್ಟಂಬರ್ 2025 (09:19 IST)
ದುಬೈ: ನಾಳೆ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯ ನಡೆಯಲಿದ್ದು ಇದಕ್ಕೆ ಮೊದಲು ಪಾಕಿಸ್ತಾನದ ಮಾಜಿ ಕ್ರಿಕೆಟಿಗರು, ಹಾಲಿ ಕ್ರಿಕೆಟಿಗರು ವೀರಾವೇಷದ ಮಾತನಾಡುತ್ತಲೇ ಇದ್ದಾರೆ.

ಬಾಂಗ್ಲಾದೇಶ ವಿರುದ್ಧಗೆದ್ದ ಬೆನ್ನಲ್ಲೇ ಪಾಕಿಸ್ತಾನ ನಾಯಕ ಸಲ್ಮಾನ್ ಅಘಾ ನಾವು ಫೈನಲ್ ನಲ್ಲಿ ಗೆಲ್ಲುತ್ತೇವೆ. ಭಾರತವನ್ನು ಸೋಲಿಸುವುದೇ ನಮ್ಮ ಗುರಿ ಎಂದಿದ್ದರು. ಇನ್ನು ವೇಗಿ ಶಾಹಿನ್ ಅಫ್ರಿದಿ ಭಾರತ ಫೈನಲ್ ಗೆ ಬರಲಿ. ಆದರೆ ಕಪ್ ಗೆಲ್ಲೋದು ನಾವೇ ಎಂದಿದ್ದಾರೆ.

ಹ್ಯಾರಿಸ್ ರೌಫ್ ಗೆ ಅಭಿಮಾನಿಗಳ ದಂಡು ಭಾರತವನ್ನು ಬಿಡಬೇಡಿ, ಅವರನ್ನು ಬಗ್ಗು ಬಡಿಯಿರಿ ಎಂದು ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಅಭಿಮಾನಿಗಳತ್ತ ಫ್ಲೈಯಿಂಗ್ ಕಿಸ್ ಕೊಟ್ಟು ಹ್ಯಾರಿಸ್ ರೌಫ್ ಕೂಡಾ ಉತ್ಸಾಹ ತೋರಿದ್ದಾರೆ.

ಇವರ ಜೊತೆಗೆ ಮಾಜಿ ಆಟಗಾರರೂ ಸೇರಿಕೊಂಡಿದ್ದಾರೆ. ಪಾಕ್ ಮಾಜಿ ಕ್ರಿಕೆಟಿಗ ಯೂನಸ್ ಖಾನ್, ಭಾರತವನ್ನು ಪಾಕಿಸ್ತಾನ ಫೈನಲ್ ನಲ್ಲಿ ಸೋಲಿಸಬೇಕು. ನಂತರ ಶೇಕ್ ಹ್ಯಾಂಡ್ ಮಾಡಬೇಕು ಎಂದಿದ್ದಾರೆ.

ಇದೇ ಮೊದಲ ಬಾರಿಗೆ ಭಾರತ ಏಷ್ಯಾ ಕಪ್ ನಲ್ಲಿ ಪಾಕಿಸ್ತಾನವನ್ನು ಎದುರಿಸುತ್ತಿದೆ. ಕಳೆದ ಎರಡು ಪಂದ್ಯಗಳಲ್ಲಿ ಪಾಕಿಸ್ತಾನದ ಜೊತೆ ಆಟಕ್ಕಿಂತ ಡ್ರಾಮಾಗಳೇ ಜಾಸ್ತಿಯಾಗಿತ್ತು. ಹೀಗಾಗಿ ಪಾಕಿಸ್ತಾನ ಆಟಗಾರರು, ಮಾಜಿಗಳು ಮಾತಿನಲ್ಲೇ ಮನೆ ಕಟ್ಟುತ್ತಿದ್ದಾರೆ. ಆದರೆ ಇತ್ತ ಟೀಂ ಇಂಡಿಯಾ ಆಟದ ಮೂಲಕ ಇದಕ್ಕೆ ಹೇಗೆ ಉತ್ತರ ಕೊಡುತ್ತದೆ ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs SL: ದಸನು ಶಾನಕ ಮಾಡಿದ ಆ ತಪ್ಪಿನಿಂದ ಟೀಂ ಇಂಡಿಯಾಗೆ ಗೆಲುವು