Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್ ಅಜೇಯ ಶತಕ, ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದ ಭಾರತ

KL Rahul

Krishnaveni K

ಲಕ್ನೋ , ಶುಕ್ರವಾರ, 26 ಸೆಪ್ಟಂಬರ್ 2025 (16:13 IST)
ಲಕ್ನೋ: ಆಸ್ಟ್ರೇಲಿಯಾ ಎ ವಿರುದ್ಧ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ ಪರ ದ್ವಿತೀಯ ಇನಿಂಗ್ಸ್ ನಲ್ಲಿ ಅಜೇಯ ಶತಕ ಗಳಿಸಿ ಕೆಎಲ್ ರಾಹುಲ್ ಸರಣಿ ಗೆಲುವು ಕೊಡಿಸಿದ್ದಾರೆ.

ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ ನಲ್ಲಿ 420 ಗಳಿಸಿತ್ತು. ಭಾರತ ಕೇವಲ 194 ರನ್ ಗಳಿಗೆ ಆಲೌಟ್ ಆಗಿತ್ತು. ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ ನಲ್ಲಿ 185 ರನ್ ಗಳಿಗೆ ಆಲೌಟ್ ಆಗಿತ್ತು. 412 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ ಭಾರತದ  ಎ ತಂಡ 5 ವಿಕೆಟ್ ನಷ್ಟಕ್ಕೆ 413 ರನ್ ಗಳಿಸುವ ಮೂಲಕ 5 ವಿಕೆಟ್ ಗಳ ಗೆಲುವು ಸಾಧಿಸಿತು.

ಇಂದಿನ ದಿನದಾಟದಲ್ಲಿ ಕೆಎಲ್ ರಾಹುಲ್ ಮತ್ತು ಸಾಯಿ ಸುದರ್ಶನ್ ಶತಕ ಹೈಲೈಟ್ಸ್ ಆಯಿತು. ಅದರಲ್ಲೂ ಜ್ವರದ ನಡುವೆಯೂ ಬ್ಯಾಟಿಂಗ್ ಮಾಡಿದ್ದ ಕೆಎಲ್ ರಾಹುಲ್ ಅಜೇಯ 176 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಇನ್ನೊಂದೆಡೆ ಸಾಯಿ ಸುದರ್ಶನ್ ಭರ್ತಿ 100 ರನ್ ಗಳಿಸಿ ಔಟಾದರು. ಈ ಇಬ್ಬರೂ ಆಟಗಾರರು ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಗೆ ಮುನ್ನ ತಮ್ಮ ಫಾರ್ಮ್ ಪ್ರದರ್ಶಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

KL Rahul: ಜ್ವರವಿದ್ದರೂ ಆಡಿ ಶತಕ ಸಿಡಿಸಿಬಿಟ್ಟ ಕೆಎಲ್ ರಾಹುಲ್