ದುಬೈ: ಏಷ್ಯಾ ಕಪ್ ಕ್ರಿಕೆಟ್ 2025 ರಲ್ಲಿ ಟೀಂ ಇಂಡಿಯಾ ಫೈನಲ್ ಗೆ ಬರಲಿ, ಹೇಗಿದ್ದರೂ ಕಪ್ ಗೆಲ್ಲೋರು ನಾವೇ ಎಂದು ಪಾಕಿಸ್ತಾನ ವೇಗಿ ಶಾಹಿನ್ ಅಫ್ರಿದಿ ಸವಾಲು ಹಾಕಿದ್ದಾರೆ.
ಏಷ್ಯಾ ಕಪ್ ನ ಎರಡೂ ಸೂಪರ್ ಫೋರ್ ಪಂದ್ಯ ಗೆದ್ದ ಟೀಂ ಇಂಡಿಯಾ ಈಗ ಫೈನಲ್ ಗೆ ಲಗ್ಗೆಯಿಟ್ಟಿದೆ. ಇದಕ್ಕೆ ಮೊದಲು ಮಾಧ್ಯಮಗಳ ಮುಂದೆ ಮಾತನಾಡಿದ್ದ ಪಾಕಿಸ್ತಾನ ವೇಗಿ ಶಾಹಿನ್ ಅಫ್ರಿದಿ, ಕಪ್ ಗೆಲ್ಲೋರು ನಾವೇ ಎಂದಿದ್ದಾರೆ.
ಕಳೆದ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಬಳಿಕ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಪಾಕ್ ನಮಗೆ ಪ್ರತಿಸ್ಪರ್ಧಿಯೇ ಅಲ್ಲ ಎಂದು ವ್ಯಂಗ್ಯ ಮಾಡಿದ್ದರು. ಇದರ ಬಗ್ಗೆ ಶಾಹಿನ್ ಅಫ್ರಿದಿಗೆ ಮಾಧ್ಯಮಗೋಷ್ಠಿಯಲ್ಲಿ ಪ್ರಶ್ನಿಸಲಾಯಿತು.
ಇದಕ್ಕೆ ಉತ್ತರಿಸಿದ ಅವರು ಮೊದಲು ಟೀಂ ಇಂಡಿಯಾ ಫೈನಲ್ ಗೆ ಬರಲಿ. ನಾವು ಇನ್ನೊಂದು ಪಂದ್ಯ ಗೆಲ್ಲಬೇಕು. ಆಗ ಫೈನಲ್ ಗೆ ಯಾವ ತಂಡವೇ ಬರಲಿ, ನಾವು ಸೋಲಿಸುತ್ತೇವೆ. ಈ ಸಲ ಕಪ್ ನಾವೇ ಗೆಲ್ಲೋದು. ನಾವು ಸ್ವಲ್ಪ ಆಕ್ರಮಣಕಾರೀ ಆಟವಾಡಬೇಕಿದೆ. ಅದನ್ನು ನಾವು ಮಾಡುತ್ತೇವೆ. ನಾವು ಮತ್ತೊಮ್ಮೆ ಕಪ್ ಗೆಲ್ಲುತ್ತೇವೆ ಎಂಬ ವಿಶ್ವಾಸ ನಮಗಿದೆ. ಸೂರ್ಯಕುಮಾರ್ ಹೇಳಿದ್ದು ಅವರ ಅಭಿಪ್ರಾಯ. ಫೈನಲ್ ನಲ್ಲಿ ನಾವು ನೋಡ್ಕೊಳ್ತೇವೆ ಎಂದಿದ್ದಾರೆ.